Monday, 30 September 2019

ತೊರೆದು ಜೀವಿಸಬಹುದೆ toredu jeevisabahude

ತೊರೆದು ಜೀವಿಸಬಹುದೆ
ಹರಿ ನಿನ್ನ ಚರಣಗಳ‌
ಬರಿದೇ ಮಾತೇಕಿನ್ನೂ
ಅರಿತು ಪೇಳುವೆನಯ್ಯ... ||ಪ||

ತಾಯಿ ತಂದೆಯ ಬಿಟ್ಟು
ತಪವ ಮಾಡಲುಬಹುದು
ದಾಯಾದಿ ಬಂಧುಗಳ ಬಿಡಲುಬಹುದು
ರಾಯ ತಾ ಮುನಿದರೆ
ರಾಜ್ಯವನೆ ಬಿಡಬಹುದು
ಕಾಯಜಾ ಪಿತನಿನ್ನ ಅಡಿಯ ಬಿಡಲಾಗದು... ||೧||

ಒಡಲು ಹಸಿದರೆ ಮತ್ತೆ
ಅನ್ನವನೆ ಬಿಡಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು
ಮಡದಿ ಮಕ್ಕಳ ಕಡೆಗೆ
ತೊಲಗಿಸಿಯೆ ಬಿಡಬಹುದು
ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು...||೨||

ಪ್ರಾಣವನು ಪರರು
ಬೇಡಿದರೆತ್ತಿ ಕೊಡಬಹುದು
ಮಾನಾಭಿಮಾನವ ತಗ್ಗಿಸಲುಬಹುದು
ಪ್ರಾಣದಾಯಕಾನಾದ ಆದಿಕೇಶವರಾಯ‌
ಜಾಣ ಶ್ರೀ ಕೃಷ್ಣ ನಿನ್ನಡಿಯ‌ ಬಿಡಲಾಗದು....||೩

No comments:

Post a Comment