Sunday, 3 November 2019

ಮಂಗಳ ಶ್ರೀ ರಾಘವೇಂದ್ರಗೆ mangala Shri raghavendra

ಮಂಗಳ ಶ್ರೀ ರಾಘವೇಂದ್ರಗೆ ಶುಭ
ಮಂಗಳ ಸುಜನಾಂಬುಧಿ ಚಂದ್ರಗೆ ಪ
ಶ್ರೀ ಸುಧೀಂದ್ರ ಕುಮಾರಗೆ ಮಂಗಳ
ಭೂಸುರನುತ ಮಹಿಮಗೆ ಮಂಗಳ
ದೇಶಿಕ ಕುಲವನ ಜಾತನಿಗೆ ಮಂಗಳ
ಭಾಸುರ ಕೀರ್ತಿಯ ಪಡೆದವಗೆ 1
ವೃಂದಾವನ ದಿವಿಯೊಳಗೆ ಸುರದ್ರುಮ
ದಂದದಿ ರಾಜಿಸುವವಗೆ ಮಂಗಳ
ಅಂಧ ಪಂಗು ಮೂಕ ಬಧಿರರೀಪ್ಸಿತ
ಸಂದೋಹ ಸಲಿಸುವ ಮುನಿಗೆ 2
ಭೂತ ಪ್ರೇತ ಬೇತಾಳ ವಿಪಿನ ಭಯ
ವೀತಿಹೋತ್ರನಿಗೆ ಮಂಗಳ
ವಾತ ಜನಕ ಜಗನ್ನಾಥ ವಿಠ್ಠಲನ
ದೂತರ ಸಲಹುವ ದಾತನಿಗೆ 3

No comments:

Post a Comment