Sunday, 3 November 2019

ರಾಘವೇಂದ್ರ ಯತಿಸಾರ್ವಭೌಮ raghavendra yati sarvabhouma

ರಾಘವೇಂದ್ರ ಯತಿಸಾರ್ವಭೌಮ ದುರಿ
ತೌಗಘದೂರ ತೇ ನಮೋ ನಮೋ ಪ
ಮಾಗಧರಿಪು ಮತಸಾಗರ ಮೀನ ಮ
ಮಾಘ ವಿನಾಶಕ ನಮೋ ನಮೋ ಅ.ಪ.
ಶ್ಲಾಘಿತ ಗುಣಗಣ ಸೂರಿಪ್ರಸಂಗ ಸ
ದಾಗಮಜ್ಞ ತೇ ನಮೋ ನಮೋ
ಮೇಘ ಶ್ಯಾಮಲ ರಾಮಾರಾಧಕ
ಮೋಘ ಬೋಧತೇ ನಮೋ ನಮೋ 1
ತುಂಗಭದ್ರ ಸುತರಂಗಿಣಿ ತೀರಗ
ಮಂಗಳಚರಿತ ಶುಭಾಂಗ ನಮೋ
ಇಂಗಿತಜ್ಞ ಕಾಳಿಂಗ ಮರ್ದ ಯದು
ಪುಂಗವ ಹೃದಯ ಸುಸಂಗ ನಮೋ
ಸಂಗಿರ ಚಿಹ್ನಿತ ಶೃಂಗಾರಾನನ
ತಿಂಗಳ ಕರುಣಾಪಾಂಗ ನಮೋ
ಗಾಂಗೇಯ ಸಮಾಭಾಂಗ ಕುಮತ ಮಾ
ತಂಗ ಸಿಂಗ ಶಿತ ಪಿಂಗ ನಮೋ 2
ಶ್ರೀ ಸುಧೀಂದ್ರ ಕರಜಾತ ನಮೋ ನಮೋ
ಭೂಸುರ ನುತ ವಿಖ್ಯಾತ ನಮೋ
ದೇಶಿಕ ವರ ಸಂಸೇವ್ಯ ನಮೋ ನಮೋ
ದೋಷವಿವರ್ಜಿತ ಕಾವ್ಯ ನಮೋ
ಕ್ಲೇಶಿತಜನ ಪರಿಪಾಲ ನಮೋ ನಮೋ
ಭಾಸಿತ ಕರುಣಾಶೀಲ ನಮೋ
ವ್ಯಾಸ ರಾಮ ಪದ ಭಕ್ತ ನಮೋ ನಮೋ
ಶಾಶ್ವತ ಕರುಣಾಸಕ್ತ ನಮೋ 3
ಕೋವಿದ ಮಸ್ತಕ ಶೋಭಿತ ಮಣಿ ಸಂ
ಭಾವಿತ ಮಹಿಮ ಪಾಲಯ ಮಾಂ
ಸೇವಾಪರ ಸರ್ವಾರ್ಥಪ್ರದ ವೃಂ
ದಾವನ ಮಂದಿರ ಪಾಲಯ ಮಾಂ
ಭಾವಜ ಮಾರ್ಗಣ ಭುಜಗ ವಿನಾಯಕ
ಭಾವಜ್ಞ ಪ್ರಿಯ ಪಾಲಯ ಮಾಂ
ಕೇವಲ ನತಜನ ಪಾವನರೂಪ ಸ
ದಾ ವಿನೋದಿ ಹೇ ಪಾಲಯ ಮಾಂ 4
ಸನ್ನುತ ಮಹಿಮ ಜಗನ್ನಾಥ ವಿಠಲ
ಸನ್ಹಿತ ಮಾನಸ ಜಯ ಜಯ ಭೋ
ಚಿಹ್ನಿತ ದಂಡಕಮಂಡಲ ಪುಂಡ್ರ ಪ್ರ
ಪನ್ನೆ ಭಯಾಪಹ ಜಯ ಜಯ ಭೋ
ಮಾನ್ಯ ಮಹಾತ್ಮ ಪ್ರಸನ್ನ ವದನ ಕಾ
ರುಣ್ಯ ಪ್ರಯೋದಧೆ ಜಯ ಜಯ ಭೋ
ಧನ್ಯ ಕ್ಷಮಾಸಂಪನ್ನ ಬುಧಜನ ಶ
ರಣ್ಯ ಸದಾರ್ಚಿತ ಜಯ ಜಯ ಭೋ 5

No comments:

Post a Comment