Sunday, 3 November 2019

ಪೊಂದಿ ಬದುಕಿರೋ pondi badukiro

ಪೊಂದಿ ಬದುಕಿರೋ ರಾಘವೇಂದ್ರ ರಾಯರ
ಕುಂದದೆಮ್ಮನು ಕರುಣದಿಂದ ಪೊರೆವರ ಪ
ನಂಬಿ ತುತಿಸುವಾ ಜನ ಕದಂಬಕಿಷ್ಟವ
ತುಂಬಿ ಕೊಡುವರೋ ಅನ್ಯ ಹಂಬಲೀಯರು 1
ಫಾಲಲೋಚನ ವಿನುತ | ಮೂಲ ರಾಮನಾ
ಶೀಲ ಸದ್ಗುಣ ನುತಿಪ ಮೇಲು ಭರತನಾ 2
ಅಲವ ಬೋಧರಾ ಸುಮತ | ಜಲಧಿ ಚಂದಿರಾ
ಒಲಿದು ಭಕ್ತಾರಾ ಪೊರೆವ ಸುಲಭ ಸುಂದರಾ 3
ಗುರು ಸುಧೀಂದ್ರರಾ ವಿಮಲ | ಕರಜರೆನಿಪರಾ
ಸ್ಮರಿಸಿ ಸುರುಚಿರಾ ವಿಮಲ ಚರಣ ಪುಷ್ಕರಾ 4
ಭೂತ ಭಾವನಾ ಜಗನ್ನಾಥ ವಿಠಲನಾ
ಪ್ರೀತಿ ಪಾತ್ರನಾ ನಂಬಿರೀತನೀಕ್ಷಣಾ 5

No comments:

Post a Comment