Sunday, 3 November 2019

ನಮೋ ನಮೋ ಶ್ರೀ ರಾಘವೇಂದ್ರ Namo namo shri raghavendra

ನಮೋ ನಮೋ ಶ್ರೀ ರಾಘವೇಂದ್ರ | ಸದ್ಗುಣ ಸಾಂದ್ರ
ಕಮಲ ನಾಭನ ದಾಸ ಕಮಲಾಪ್ತ ಭಾಸಾ ಪ
ದೇಶ ದೇಶಗಳಿಂದ ದೈನ್ಯದಿಂದಲಿ ಬಂದಾ
ಶೇಷ ಜನರಿಗಳಿಗಿಷ್ಟ ಸಲ್ಲಿಸುವ ವಿಶಿಷ್ಟಾ
ನಾ ಸೇರಿದೆನೋ ನಿನ್ನ ನಮಿತ ಜನರ ಪ್ರಸನ್ನ
ಭಾಸುರ ಚರಿತನೆ ಭಜಿಸುವೆನು ಅನವರತ 1
ಭೇದಾರ್ಥ ಜಲಜಾರ್ಕ ಭೂರಿ ಬಲತರತರ್ಕ
ವಾದಿಶೈಲ ಕುಲಶ ವರಹಸುತೆ ವಾಸಾ
ಬಾಧಿಪ ಅಘ ಜೀರ್ಣ ಮಾಡು ಗುರುವರ ಪೂರ್ಣ
ಬೋಧ ಮತ ಸಂಭೂತ ಭೂರಿ ಪ್ರಖ್ಯಾತ 2
ನತಜನಾಶ್ರಯ ಪ್ರೀಯ ನೆರೆ ನಂಬಿದೆನೋ ಮಾಯ
ಮತ ಕದಳಿ ಗಜೇಂದ್ರ ವಿಬುಧಾಬ್ದಿ ಚಂದ್ರ
ಕ್ರತು ಭುಕು ಜಗನ್ನಾಥ ವಿಠಲನ ನಿಜದೂತ
ತುತಿಸಲಾಪೆನೆ ನಿನ್ನ ಯತಿಶಿರೋರನ್ನ 3

No comments:

Post a Comment