Monday, 30 March 2020

ಒಂಬತ್ತು ಬಾಗಿಲೊಳು ಒಂದು ದೀಪವ ಹಚ್ಚಿ |


ಒಂಬತ್ತು ಬಾಗಿಲೊಳು ಒಂದು ದೀಪವ ಹಚ್ಚಿ |
ನಂಬಿಗಿಲ್ಲದೆ ಒಗತನ ಮಾಡಿದೆನೆ ಸೂವಕ್ಕ ಸುವ್ವಿ ಪ
ತನುವೆಂಬ ಕಲ್ಲಿಗೆ ಮನ ಧಾನ್ಯವನುತುಂಬಿ |
ಒನೆದೊನೆದು ಒಬ್ಬಳೆ ಬೀಸಿದೆನೆ 1
ಅಷ್ಟ ಮದಗಳೆಂಬ ಅಷ್ಟಧಾನ್ಯವ ತೆಗೆದು |
ಕುಟ್ಟಿ ಕುಟ್ಟಿ ಕಾಳು ಮಾಡಿದೆನೆ 2
ನಷ್ಟ ತರ್ಕವೆಂಬ ಕಟ್ಟಿಗೆ ಉರಿದು ನಾ |
ನಿಷ್ಠೆಯಿಂದನ್ನವ ಮಾಡಿದೆನೆ 3
ಅಷ್ಟರೊಳು ಗಂಡಬಂದ ಅಡುವ ಗಡಿಗೆಯ ಬಡೆದ |
ಹುಟ್ಟು ಮುರಿದು ಮೂಲೆಗೆ ಹಾಕಿದನೆ 4
ಹುಟ್ಟಿನಲಿ ತಿರುಹುವ ಒಟ್ಟಿನಲಿ ಕುದಿಸುವ |
ಕಟ್ಟಂಬಲಿಯನೆತ್ತಿ ಕುಡಿಸಿದನೆ............... 5
ಉಡುವ ಸೀರೆಯ ಸೆಳೆದು ಗಿಡದ ತೊಪ್ಪಲ ಸುತ್ತಿ |
ಕಡೆಗೆ ಬಾರದಹಾಗೆ ಮಾಡಿದನೆ 6
ಮಾಡಿದೆನೆ ಒಗೆತನ ನಂಬಿಗಿಲ್ಲದ ಮನೆಯೊಳು |
ಕೊಡಿದೆನೆ ಪುರಂದರವಿಠಲನ................. 7


No comments:

Post a Comment