Monday, 30 March 2020

ಒಂದೇ ನಾಮದೊಳಡಗಿದುವೊ


ಒಂದೇ ನಾಮದೊಳಡಗಿದುವೊ ಆ -
ನಂದದಿಂದುಸುರುವ ಅಖಿಳ ವೇದಗಳು ಪ
ಒಂದೇ ನಾಮವು ಪ್ರಹ್ಲಾದನ ಕಾಯ್ತು - ಮ -
ತ್ತೊಂದೆ ನಾಮವೆ ಅಜಮಿಳನ ಸಲಹಿತು ||
ತಂದೆ ತಾಯಿಯ ಬಿಟ್ಟ ಕಂದ ಧ್ರುವರಾಯಗಾ -
ನಂದಪದವನಿತ್ತ ಅದ್ಭುತಗುಣವೆಲ್ಲ 1
ಮಚ್ಛ್ಯಾದ್ಯಾನಂತಾವತಾರ ಅಷ್ಟಾದಶ
ಸ್ವಚ್ಛ ಪುರಾಣಗಳಮೃತದ ಸಾರ ||
ಕಚ್ಛಪನಾಗಿ ತ್ರೈಜಗಕೆ ಆಧಾರ ತ -
ನ್ನಿಚ್ಛೆಯಿಂದಲಿ ತಾನು ಮಾಳ್ಪ ವ್ಯಾಪಾರ 2
ಒಬ್ಬರೀತಗೆ ಸಮರಿಲ್ಲ ತ -
ನ್ನಬ್ಬರದಿಂದಲಿ ಸಲಹುವನೆಲ್ಲ ||
ಕಬ್ಬು ಬಿಲ್ಲನ ಪಿತ ಪುರಂದರ ವಿಠಲ ವೈ
ದರ್ಭಿಯ ರಮಣನ ವರಸುಗುಣಗಳೆಲ್ಲ 3


No comments:

Post a Comment