Monday, 30 March 2020

ಒಂದೆ ಮನದಲಿ ಭಜಿಸು ವಾಗ್ದೇವಿಯ


ಒಂದೆ ಮನದಲಿ ಭಜಿಸು ವಾಗ್ದೇವಿಯ |
ಇಂದು ಮತಿಕೊಡುವಳು ಶ್ರೀಹರಿಯ ಧ್ಯಾನದೊಳು ಪ
ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ |
ಬಂದು ಆರಂಭಿಸಲು ಹರಿ ವಿಶ್ವಮಯನೆಂದು ||
ಬಂದ ವಿಪ್ಲವ ಕಳೆದು ಭಾವಶುದ್ಧಿಯನಿತ್ತು |
ಹೊಂದಿಸಿದಳು ಶ್ರೀ ಹರಿಯ ಚರಣವನು || 1
ಅಂದು ದಶಮುಖನನುಜ ವಂದಿಸದೆ ವಾಣಿಯನು |
ಬಂದು ತಪವನು ಗೈಯೆ ಬಹುಕಾಲಕೆ ||
ಅಂದದಿಂದ ಮೆಚ್ಚಿ ವರವಧಿಕ ಬೇಡೆನಲು |
ಬಂದು ಜಿಹ್ವೆಯಲಿ ನಿದ್ರೆಯನು ಬೇಡಿಸಿದಳು 2
ಅರಿತು ಭಜಿಸಲು ಬಿಡದೆ ಅಜನರಸಿಯ ನಿತ್ಯ|
ಉರುತರವಾದ ವಾಕ್ ಶುದ್ಧಿಯನಿತ್ತು ||
ನಿರುತ ಶ್ರೀ ಪುರಂದರ ವಿಠಲನ ಸೇವೆಯೊಳು |
ಪರತತ್ತ್ವದ ಕಥಾಮೃತವನುಣಿಸಿದಳು 3


No comments:

Post a Comment