Sunday, 29 March 2020

ಏಳು ನಾರಾಯಣ ಏಳು


ಏಳು ನಾರಾಯಣ ಏಳು ಲಕ್ಷ್ಮೀರಮಣಏಳು ಶ್ರೀಗಿರಿಯೊಡಯ ಶ್ರೀವೆಂಕಟೇಶ ಪಕಾಸಿದ್ದ ಹಾಲನ್ನು ಕಾವಡಿಯೊಳ್ ಹೆಪ್ಪಿಟ್ಟುಲೇಸಾಗಿ ಕಡೆದು ಹೊಸ ಬೆಣ್ಣೆ ಕೊಡುವೆಶೇಷಶಯನನೆ ಏಳು ಸಮುದ್ರ ಮಥನವ ಮಾಡುದೇಶ ಕೆಂಪಾಯಿತು ಏಳಯ್ಯ ಹರಿಯೇ 1
ಅರುಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳಸುರರು ತಂದಿದ್ದಾರೆ ಬಲು ಭಕುತಿಯಿಂದಅರವಿಂದನಾಭ ಸಿರಿವಿಧಿಭವಾದಿಗಳೊಡೆಯಪಿರಿದಾಗಿ ಕೋಳಿ ಕೂಗಿತೇಳಯ್ಯ ಹರಿಯೇ 2
ದಾಸರೆಲ್ಲರು ಬಂದು ಧೂಳಿದರ್ಶನಕೊಂಡುಲೇಸಾಗಿ ತಾಳ ದಂಡಿಗೆಯ ಪಿಡಿದುಶ್ರೀಶ ಪುರಂದರ ವಿಠಲರಾಯ ನಿಮ್ಮ ಪಾದವನು ಲೇಸಾಗಿ ಪೊಗಳುವರು ಹರಿಯೇ * 3


No comments:

Post a Comment