Monday, 30 March 2020

ಒಪ್ಪನಯ್ಯ - ಹರಿ - ಮೆಚ್ಚನಯ್ಯ


ಒಪ್ಪನಯ್ಯ - ಹರಿ - ಮೆಚ್ಚನಯ್ಯ ಪ
ಉತ್ತಮ ತಾನೆಂದುಕೊಂಡು ಉದಯ ಕಾಲದಲ್ಲಿ ಎದ್ದು |
ನಿತ್ಯನಿತ್ಯ ನೀರಿನೊಳಗೆ ಕಾಗೆ ಹಾಗೆ ಮುಳುಗುವವಗೆ 1
ಚರ್ಮದ ದೇಹಕ್ಕೆ ಗೋಪಿಚಂದನವ ತೊಡೆದುಕೊಂಡು |
ಎಮ್ಮೆಯ ರೋಗದ ಬರೆಯ ಹಾಗೆ ಅಡ್ಡತಿಡ್ಡ ಬರೆದ ಮನುಜಗೆ 2
ಮಾತಿನಲ್ಲಿ ಮತ್ಸರವು ಮನಸಿನೊಳಗೆ ವಿಷದ ಗುಳಿಗೆ |
ಓತಿಯಂತೆ ಮರದ ಮೇಲೆ ನಮಸ್ಕಾರ ಮಾಡುವವಗೆ 3
ನಿಷ್ಠೆಯುಳ್ಳವ ತಾನೆಂದು ಪೆಟ್ಟಿಗೆ ಮುಂದಿಟ್ಟು ಕೊಂಡು |
ಕೊಟ್ಟಿಗೆಯೊಳಗಿನ ಎತ್ತಿನಂತೆ ನುಡಿಸುವ ಗಂಟೆಯ ಶಬ್ದಕೆ ಆತ 4
ಏಕೋಭಾವ ಏಕೋಭಕ್ತಿ ಏಕನಿಷ್ಠೆಯಿಂದಲಿ | ಬೇಕಾದಂಥ ಮುಕುತಿಯ ನೀಡುವ ಪುರಂದರವಿಠಲನಸ್ಮರಿಸದ ಮನುಜ 5


No comments:

Post a Comment