Sunday, 29 March 2020

ಎನಗೂ ಆಣೆ- ನಿನಗೂ ಆಣೆ


ಎನಗೂ ಆಣೆ- ನಿನಗೂ ಆಣೆ |
ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ ಪ
ನಿನ್ನನು ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ-ರಂಗ |
ಎನ್ನನು ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ 1
ತನು-ಮನ-ಧನದಲಿ ವಂಚಕನಾದರೆ ಎನಗೆ ಆಣೆ-ರಂಗ-|
ಮನಸು ನಿನ್ನೊಳು ನಿಲಿಸದಿದ್ದರೆ ನಿನಗೆಆಣೆ 2
ಕಾಕುಮನುಜರ ಸಂಗವ ಮಾಡಿದರೆನಗೆ ಆಣೆ-ರಂಗ-|
ಲೌಕಿಕವನ್ನು ಬಿಡಿಸದಿದ್ದರೆ ನಿನಗೆ ಆಣೆ 3
ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ-ರಂಗ-|
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ 4
ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ-ರಂಗ-|
ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ 5


No comments:

Post a Comment