Sunday, 29 March 2020

ಎತ್ತಿಕೊಳ್ಳೆ ಗೋಪೀ ರಂಗನ


ಎತ್ತಿಕೊಳ್ಳೆ ಗೋಪೀ ರಂಗನ |
ರಚ್ಚೆ ಮಾಧವರಾಯ ನಿಲುವನಲ್ಲ ||ಪ||

ಕರ್ಣದ ಮಾಗಾಯಿ ಕದಪಲಿ ಹೊಳೆಯುತ |
ಎಣ್ಣೆಮಣಿಯ ಕೊರಳಲಿ ಹುಲಿಯುಗುರು ||
ಚಿನ್ನದ ಬಾಯೊಳು ಅಮೃತವ ಸುರಿಯುತ್ತ |
ಬೆಣ್ಣೆ-ಹಾಲನುಂಬುವೆನೆಂದು ಬಂದ 1
ಅಂಬೆಗಾಲಿಕ್ಕುತ ತುಂಬಿಯೊಲ್ ಮೊರೆಯುತ—|
[ಚೆಂದದ] ಅರಳೆಲೆ ನಲಿದಾಡುತ ||
ಬಂದು ಸರಳನಂದದಿ ಬಾಯ ಬಿಡುತ ಮು—|
ಕುಂದನು ಮೊಲೆಯನುಂಬುವೆನೆಂದು ಬಂದ 2
ಬಿಗಿದ ಪಟ್ಟೆಯಲಿ ಬಾಯ್‍ತಲೆಯು ಹೊಳೆಯುತಿರೆ |
ಚಿಗುಟುತ ಎಡದ ಕೈಯಲಿ ಕುಚವ ||
ನಗುತ ನಾಚುತ ಗೋಪಿಯ ಮುಖ ನೋಡುತ |
ಮಿಗೆ ನಲಿನಲಿದುಂಡ ಪುರಂದರವಿಠಲ 3


No comments:

Post a Comment