Sunday, 29 March 2020

ಎನಗೊಬ್ಬ ದೊರೆ ದೊರಕಿದನು


ಎನಗೊಬ್ಬ ದೊರೆ ದೊರಕಿದನು|ವನಜಸಂಭವನಯ್ಯ ಹನುಮನಂತರ್ಯಾಮಿ ಪಮಾತಾಪಿತನು ಆದ ಭ್ರಾತೃ ಬಾಂಧವನಾದ |ಪ್ರೀತಿಯಿಂದಲಿ ತಾನೇ ನಾಥನಾದ ||ಖ್ಯಾತನು ತಾನಾದ ದಾತನು ತಾನಾದ |ಭೂತೇಶ ವಂದ್ಯ ವಿಭೂತಿಪ್ರದನಾದ1
ಅಜರಾಮರಣನಾದ ಅಪ್ರಾಕೃತನಾದ |ವಿಜಯಗೊಲಿದು ನಿಜ ಸುತನಾದ ||ಭುಜಗಶಯನನಾದ ತ್ರಿಜಗಹೃವಂದಿತನಾದ |ಅಜಮಿಳನಂತ್ಯಕತ್ಯಂತ ಸುಹೃದನಾದ2
ಶಂಖ ಚಕ್ರಾಂಕಿತದ ಸಂಕರುಷಣನಾದ |ಬಿಂಕದ ಬಿರುದುಗಳ ಪೊತ್ತವನಾದ ||ಪಂಕಜನಯ್ಯನ ಮೀನಾಂಕ ಜನಕನಾದ |ಓಂಕಾರ ಮೂರುತಿ ಪುರಂದರ ವಿಠಲನು 3


No comments:

Post a Comment