Wednesday, 8 January 2020

ಸ್ವಾಮಿ ಶಂಕರನಿರಲಿಕ್ಕೆ ಕಾಮದ swamy shankara niralikke


ಸ್ವಾಮಿ ಶಂಕರನಿರಲಿಕ್ಕೆ ಕಾಮದ ಕಳವಳಿಕೇಕೆ \\ಪ\\
ಗುರುನಾಮ ನಿಧಾನಿರಲಿಕ್ಕೆ  ಎನಗಿಲ್ಲೆಂಬುವದೇಕೆ \\ಅ.ಪ.\\
ಅನಾಥ ಬಂಧು ಅನುದಿನ ಎನಗಿರೆ  ಅನುಕೂಲದ ಚಿಂತ್ಯಾಕೆ | 
ತನುಮನಧನದೊಳು ತಾನೆ ತಾನಿರಲು ಅನುಮಾನಿಸಲಿನ್ಯಾಕೆ ಸ್ವಾಮಿ \\1\\
ದಾತನೊಬ್ಬ ಶ್ರೀನಾಥ ಎನಗಿರಲು ಯಾತಕೆ ಪರರ ದುರಾಶೇ 
ಮಾತು ಮಾತಿಗೆ ತೋರುವ ಸದ್ಗುರು ತೇಜಃ ಪುಂಜಗಳ್ಯಾಕೆ ಸ್ವಾಮಿ \\2\\
ದೊಡ್ಡದು ಸಣ್ಣದು ಧಡ್ಡನು ಜಾಣನು  ಎಂದೆಣಿಸುವದಿನ್ಯಾಕೆ 
ಗುಡ್ಡದ್ಹಾಂಗಶ್ರೀ ಶಂಕರನಿರಲು ದುಡ್ಡಿನ ಹಂಗುಗಳ್ಯಾಕೆ ಸ್ವಾಮಿ \\3\\


No comments:

Post a Comment