Wednesday, 8 January 2020

ಹೋಗಿ ನೋಡುವ ಬನ್ನಿರಿ ಶ್ರೀ hogi noduva banniri


ಹೋಗಿ ನೋಡುವ ಬನ್ನಿರಿ ಶ್ರೀ ಜಗದೀಶನಿಗೆ ಶ್ರೀನಿವಾಸನ ಸಾಗಿ ನೋಡುವ ಬನ್ನಿ ಬಾಗಿ ಪದ |ನಲಿಸದಿ ನೀಗಿ ಭವಕೇರಿದಿ ಭೋಗಿಶಯನ ಯೋಗಿ ಪ
ಪರಮ ಭಕ್ತರ ಪಾಲನ ಸವ್ಯಸೂಕರಧರಣಿ ಜಯವರನ ||ಕೊರಳೊಳು ಕೌಸ್ತುಭ ಶ್ರೀ ವತ್ಸಲಾಂಛನ |ಕರಿವರ ಭಯನಾಶನ || ಅಘಶೋಷಣ 1
ಕಾಮಕೋಟಿ ತೇಜನ ಅನಂತ ಜನ ಕಾಮಿತ ಫಲ ಪೂರ್ಣನ |ವಾಮಕರದಿ ಅಕ್ಷಮಾಲಾಧರಸಂಭ್ರಮ ಪೂರಿತ ಶೀಲನ | ಶ್ರೀ ಲೋಲನ 2
ವಕ್ಷಸ್ಥಳದಿ ಶಿರಿಯ ಧರಿಸಿಹ ನಿಜ........... | ಮೋಕ್ಷ.................ಲಕ್ಷ ಅಲಕ್ಷ ವಿಲಕ್ಷ ಸುಲಕ್ಷ ನಿಲಕ್ಷ || ಸಾಕ್ಷೀ ಹರಿಯ ಮುರಾರಿಯ 3
ನೀಲಮೇಘಶ್ಯಾಮನ ಸುಜನರ ಅನುಕೂಲ ಸರಡಿಗಿ ವಾಸನ |ಕಾಲ ಕರ್ಮಾತೀತ ಕಲಿಮಲ ಜಲ್ಪ | ನಿರ್ಮೂಲ | ನಾಶನ ಪಾವನ || ಶ್ರೀ ದೇವನ 4
ಪಂಕಜೋದ್ಭವನಯ್ಯನ ಮುನಿಜನ ಹೃತ್ಪಂಕಜಆಳ್‍ರೂಪನ ಶಂಖಚಕ್ರಧರ ಕಟಿ ಪೀತಾಂಬರಶಂಕರಾಂತರಂಗನ | ಸುಸಂಗನ 5


No comments:

Post a Comment