Wednesday, 8 January 2020

ಸ್ವಾಮಿ ನೀ ಮಾಡಿದುಪಕಾರಾ swamy nee maadidupakarava


ಸ್ವಾಮಿ ನೀ ಮಾಡಿದುಪಕಾರಾ ಕಿಂತು ಪಾಮರನ ಪ್ರತಿಉಪಕಾರಾ ಭೀಮಾಶಂಕರ 
ಗುರುವಾಗುವ ಪ್ರಕಾರಾ ಈ ಮನಕೆ ಎಂದಿಗೆ ತೋರದಾಕಾರಾ ಸ್ವಾಮಿ \\ ಪ\\
ಲಕ್ಷ ಎಂಬತ್ತು ಮೂರೊಂದನು  ಯೋನಿ ಕುಕ್ಷಿಯೊಳಗೆ ಹೊಕ್ಕು ಬಂದೆನೊ 
ಭಕ್ಷ್ಯಾಭಕ್ಷ್ಯವ ಮೆದ್ದೆನು  ಅನುಪೇಕ್ಷಿಯೊಳಗೆ ಮುಳುಗಿದ್ದೆನೋ  
ಭಿಕ್ಷುಕರೊಡೆಯ ನಿರೀಕ್ಷಿಸಿ ಕೃಪಾ ಕಟಾಕ್ಷದಿ ಸದ್ಗುರು ರಕ್ಷಿಸಿದಂಥಾ \\1\\
ನೀರೊಳು ಜೀವಿಸುತಿದೆ ಮೀನಾ ನೀರು ಕಾರಣವರಿಯದು  
ಆ ಮೀನಾ  ಪಾರವಿಲ್ಲದಂಥದೀ ಮೀನಾ  ಪರವಸ್ತು ಖೂನನರಿಯದು 
ಮನ ಮೀನಾ  ನಾರೇರ ನೋಟಕ್ಕೆ ಸೇರಿ ತಾ ಹೋದೀತು  ಸಾರವಸ್ತುವ ತಂದು ತೋರಿಸಿದಂಥ \\2\\
ತನುವು ತನ್ನೊಳಗೆ ತಾ ತೋರದು  ತನು ಮನದ ವೃತ್ತಿಗೆ ತಾ ಬಾರದು
 ಜನನ ಮೃತ್ಯಂಗಳು ದೋರದು ಎನಗೆ ಸಾಧು ಸಜ್ಜನ ಸಂಗ ದೊರಕದು  
ಘನ ಗುರುಶಂಕರ ಚಿನುಮಯರೂಪ ದನುಭವಕೆ ತಂದು ಎನಗೆ ನೀ ಕೊಟ್ಟಂಥ \\3\\

No comments:

Post a Comment