Wednesday, 25 December 2019

ವಿಜಯರಾಯರ ಪಾದವ ನೀ vijayarayara padava nee

ವಿಜಯರಾಯರ ಪಾದವ ನೀ
ಭಜಿಸಿ ಬದುಕೆಲೊ ಮಾನವ ಪ
ವೃಜಿನವೆಲ್ಲವ ಕಳೆದು ಕರುಣದಿ |
ಅಜನನಯ್ಯನ ತೋರುವ ಅ.ಪ.
ಜಗಕೆ ಹರಿ ಪರನೆಂದು ತಾ ಭುಜ
ಯುಗಗಳೆತ್ತಿ ಸಾರಿದಾ ||
ಭೃಗು ಮುನಿ ಇವರೆಂದು ಭಾವಿಸಿ
ಮಿಗೆ ಸುಭಕ್ತಿಲಿ ಸರ್ವದಾ 1
ವರಹಜಾ ತಟದಲ್ಲಿ ಚೀಕಲ |
ಪರವಿಗ್ರಾಮದಿ ಜನಿಸಿದ ||
ಪರಿಪರಿಯಲನುಭವಿಸಿ ಬಡತನ
ಜರಿದು ಭವ ವೈರಾಗ್ಯ ಧರಿಸಿದ 2
ಭಕುತಿ ಪೂರ್ವಕವಾಗಿ ಬಿಡದಲೆ |
ಸಕಲಕ್ಷೇತ್ರವ ಚಲಿಸಿದಾ ||
ಮುಕುತಿ ಸುಖದಾತಾರನಾದ |
ಲಕುಮಿ ರಮಣನ ತುತಿಸಿದಾ 3
ತಾ ಸುಸ್ವಪ್ನದೊಳೊಂದು ದಿನ ಶ್ರೀ
ವ್ಯಾಸ ಕಾಶಿಗೆ ತೆರಳಿದಾ ||
ವಾಸುದೇವನ ಕಂಡು ನಮಿಸಿ
ಲೇಸು ವರ ಸ್ವೀಕರಿಸಿದಾ 4
ಪುರಂದರಾರ್ಯರ ಕವನಗಳು
ಮೂರೆರಡು ಲಕ್ಷಕೆ ತ್ರಯಪದ
ಕೊರತೆ ತಾ ಪೂರೈಸಿದ 5
ಬಾಲೆಯೋರ್ವಳು ಬಂದು ಪ್ರಾರ್ಥಿಸೆ
ಕೇಳುತಾಕೆಯ ಪತಿಯನು
ಕಾಲ ಪಾಶವ ಬಿಡಿಸಿ ಕರುಣದಿ
ಪಾಲಿಸಿದ ಸುಮಹಾತ್ಮರ 6
ಶ್ರೀಮನೋಹರ ಶಾಮಸುಂದರ
ನಾಮ ಮಹಿಮೆಯ ವಿಧ ವಿಧ
ಭೂಮಿ ಸುಮನಸ ಸ್ತೋಮಕನುದಿನ
ಪ್ರೇಮದಿಂದಲಿ ಬೀರಿದ 7

No comments:

Post a Comment