Wednesday, 25 December 2019

ಪೊಂದಿ ಭಜಿಸೊ ನಿರುತ pondi bhajiso niruta

ಪೊಂದಿ ಭಜಿಸೊ ನಿರುತ
ಮಾನವ ಮಹಿವೃಂದಾರಕವ್ರಾತ ಪ
ವಂದಿತ ಶ್ರೀ ಸುಯಮೀಂದ್ರರ ಹೃದಯಾರ
ವಿಂದ ಭಾಷ್ಕರ ಸುವೃತೀಂದ್ರ ಪದಮುಗ ಅ.ಪ
ಧರೆಯೊಳು ದ್ವಿಜನಿಕರ ಉದ್ಧರಿಸಲು
ಗುರುವರ ಸುಶೀಲೇಂದ್ರರ
ಕರದಿ ತುರಿಯಾಶ್ರಮ ಧರಿಸುತ ಶ್ರೀಮೂಲ
ತರಣಿ ಕುಲೇಂದ್ರನ ಚರಣವ ಪೂಜಿಸಿ
ಮರುತ ಶಾಸ್ತ್ರವ ಭಕ್ತಿ ಪೂರ್ವಕ
ನಿರುತ ಪ್ರವಚನ ಗೈದು ಶಿಷ್ಯರಿ
ಗೊರೆದು ಕರುಣದಿ ಪೊರೆದ ಪಾವನ
ಚರಿತರಡಿದಾವರೆಗಳ್ಹರುಷದಿ 1
ಸತಿಭಕ್ತಿ ಸುವಿರಕತಿ ಶಾಂತಾದಿ
ಹಲವು ಸದ್ಗುಣ ಪ್ರತತಿ
ಕಲಿಯಾಳಿಕೆಯೊಳು ಸ್ಥಳವಕಾಣದೆ ವಿಧಿ
ಬಳಿಗೆ ಬಿನ್ನೈಸಲು ನಳಿನಜ ಯೋಚಿಸಿ
ಇಳೆಯೊಳಗೆ ಸುವೃತೀಂದ್ರ ತೀರ್ಥರ
ಚಲುವ ಹೃದಯ ಸ್ಥಾನ ತೋರಲು
ಬಳಿಕ ಸುಗುಣಾವಳಿಗಳಿವರೊಳು
ನೆಲಸಿದವು ಇಂಥ ಅಲಘು ಮಹಿಮರ 2
ಸಿರಿಯಾಸ್ಯ ಸಂವತ್ಸರದಿ ಸುವೈಶಾಖ
ವರಮಾನ ಶಿತಪಕ್ಷದಿ
ಹರಿದಿನದಲಿ ದಿವ್ಯ ಮೂರನೆಯಾಮದಿ
ವರ ಮಂತ್ರ ಮಂದಿರ ಪರಮ ಸುಕ್ಷೆತ್ರದಿ
ಸಿರಿಮನೋಹರ ಶಾಮಸುಂದರ 3

No comments:

Post a Comment