Wednesday, 11 December 2019

ಶರಣು ಶ್ರೀ ಗುರುರಾಘವೇಂದ್ರಗೆ sharanu shree guru raghavendrarige

ಶರಣು ಶ್ರೀ ಗುರುರಾಘವೇಂದ್ರಗೆ
ಶರಣು ಯತಿಕುಲತಿಲಕಗೆ        || ಪ ||
ಶರಣು ಶರಣರ ಪೊರೆವ ಕರುಣಿಗೆ
ಶರಣು ಹರಿಗುಣ ಲೋಲಗೆ    || ಅ ||
ಮಧ್ವಮತ ಶುಭವಾರುಧಿಚಂದ್ರಗೆ
ಸಿಧ್ಧಸಾಧನಮೂರ್ತಿಗೆ
ಬಧ್ಧ ಶ್ರೀಹರಿದ್ವೇಷಿ ಮಾಯ್ಗಳ
ಗೆದ್ದ ರಘುಕುಲ ರಾಮದೂತಗೆ – ಶರಣು        || ೧ ||
ನಿತ್ಯನಿರ್ಮಲ ಪುಣ್ಯಗಾತ್ರಗೆ
ಭೃತ್ಯಪಾಲಕ ಸುಗುಣಪಾತ್ರಗೆ
ಸತ್ಯ ಜ್ಞಾನ ಸುಮೋದ ನೇತ್ರಗೆ
ಸ್ತುತ್ಯ ಯತಿವರ ಸುಜನಮಿತ್ರಗೆ – ಶರಣು    || ೨ ||
ಮೋದದಾಯಕ ಭೇದಸಾಧಕ
ಮೇದಿನಿಸುರಜಾಲನಾಯಕ
ಮೋದತೀರ್ಥರ ಚರಣಸೇವಕ
ಆದಿ ಗುರುಜಗನ್ನಾಥವಿಠ್ಠಲ ದೂತಗೆ – ಶರಣು        || ೩ ||

No comments:

Post a Comment