Thursday, 12 December 2019

ಮಣಿ ಮೌಳಿ ಮೊಲ್ಲೆ mani malli molle

ಮಣಿ ಮೌಳಿ ಮೊಲ್ಲೆ ಮಲ್ಲಿಗೆಯ ದಂಡೆ
ಪಿಂಛೆದೊಂಗಲ ಉತ್ತಮಾಂಗ |
ಮೆರೆವ ಕರ್ಣಕುಂಡಲ ಕೌಸ್ತುಭ ಕಮಲಮಾಲೆ ಕಂಬುಕಂಠ |
ಸಿರಿಗಂಧ ಸಿರಿವತ್ಸ ಸಿರಿತುಲಸಿ ಸಿರಿವಕ್ಷ ಸ್ಥಳ |
ಮರಕತಮಣಿಯ ಕಡಗ ಕಂಕಣ
ಕಡೆಯ ತೊಡೆಯ ಸಮಚರಣ |
ಹೇಮವಸನ ಶ್ಯಾಮಲ ಕೋಮಲಾಂಗ |
ಅಹೋ ಗೋಪಿಯರ ಮೋಹಿಸುತಿದೆ (ಕೃಷ್ಣ)
ಅಹೋ ಜಗಜ್ಜನರÀ ಪಾಲಿಸುತಿದೆ |
ಅಹೋ ಪುರಂದರವಿಠಲನ ಬಾಲಲೀಲೆ 1
ಮಟ್ಟತಾಳ
ಪೊಂಬಟ್ಟೆಯ ಮೇಲೆ ಕಾಂಚೀದಾಮದ
ಒಲ್ಲಿಯ ಉಡಿಸುತ್ತಿ |
ಜಂಬು-(ನೀಲ) ಚೂತಗಳ ಎಳದಳಿರಮುಕುಟದ
ಮೇಲೆಸುತ್ತಿಕೊಂಡು |
ಕೊಂಬು ಕೊಳಲು ತುತ್ತುರಿ-ಮೌರಿಯಗಳು |
ಭಂವ್ ಭಂವ್ ಭಂವ್ ಝಂ ಝಂ ಝಮ್ಮೆಂಬ |
ರಾಮಕೃಷ್ಣ ಗೋವಳರ ಸಂಭ್ರವವು ಸುರರನೊಲಿಸಿತು |
ಜಂಭಭೇದಿ ಶಂಭು ಅಂಬುಜಸಂಭವನುತ |
ಕಂಬುಗ್ರೀವ ತಿರುವಿಂಗಳಪ್ಪ ಪುರಂದರವಿಠಲ 2
ತ್ರಿವಿಡೆತಾಳ
ಜಯ ಜಯ ಶ್ರೀನರಸಿಂಹ ಮಹಾಭಯ ನಿವಾರಣ |
ಜಯ ಜಯ ಶ್ರೀ ದಿವ್ಯಸಿಂಹ ಘೋರದ(ದುರಿತ) ನಿವಾರಣ |
ಪ್ರಹ್ಲಾದವರದ ಶ್ರೀ ಪುರಂದರವಿಠಲರಾಯ 3
ಅಟತಾಳ
ಅಹಂಕಾರ ಮಮಕಾರವಳಿಯದೆ ವಿಹಂಗಗಮನನು |
ಸಿಲುಕುವನೆ ಮರುಳೆ |
ಕಾಮ ಕ್ರೋಧವಬಿಡದನ್ನಕ್ಕ ಪರಬೊಮ್ಮನೊಲುಮೆ-
ಯೆತ್ತ ನೀನೆತ್ತ ಮರುಳೆ |
ಆ ಹರಿದಾಸ ಚರಣಾಬ್ಜಕೆ ಎರಗದೆ ಪುರಂದರವಿಠಲನು
ಸುಲಭನೆ ಮರುಳೆ? | 4
ಆದಿತಾಳ
ವಾಮನ ವಾಸುದೇವ ಪದ್ಮನಾಭ ಹರೆ |
ದಾಮೋದರ ಪ್ರದ್ಯಮ್ನ ಸಂಕರ್ಷಣ ವಾಸುದೇವ |
ಅನಿರುದ್ಧ ಪುರಂದರವಿಠಲರಾಯ ಪುರೋಷತ್ತಮ ಹರೆ 5
ಜತೆ
ಮನೋವಚನಗಳಲ್ಲಿ ಕಾಯಕರ್ಮಗಳಲ್ಲಿ |
ಕೊಲ್ಲೊ ಕಾಯೊ ನಂಬಿದೆ ಪುರಂದರವಿಠಲ ||

No comments:

Post a Comment