ಅಂಗುಟ ಮಾತುರವೆಂಬ ಮೂರುತಿ ಪರೀಕ್ಷಿಸಿತು |
ಕಂಡು ಕಂಡರÀಸಿಕೊಂಬ ಕಮನೀಯ ಮೂರುತಿಯು |
ಆತುಮ ಮೂರುತಿ ಅಂತರಾತುಮ ಮೂರುತಿಯು |
ಬಿಂಬ ಮೂರುತಿ ಜೀವದಾಕಾರ ಮೂರುತಿಯು |
ಅಣುರೇಣುವೆಂಬ ಚಿನ್ಮಯ ಮೂರತಿಯು |
ಮುನಿಗಳ ಹೃದಯದೊಳು ಮಿನುಗುವ ಮೂರುತಿಯು |
ಬೊಮ್ಮಗಾದಾ ಮೂರುತಿಯು ತಾನೆಲ್ಲಿಂದೆಲ್ಲಿ ಬಂದಿತು |
ಅಮರರಾಭರಣ ತಾನೆಲ್ಲಿಂದೆಲ್ಲಿಗೊದಗಿತೊ |
ಎನಗೆ ಪ್ರಸನ್ನನಾದ ಉಡುಪಿಯ ಕೃಷ್ಣ ಮೂರುತಿ |
ಪುರಂದರವಿಠಲನ ಒಲುಮೆಯೆಂತೊ | 1
ಮಟ್ಟತಾಳ
ಮಂದಾರಮಲ್ಲಿಗೆ ತುರುಬಲಿ ದಿವ್ಯಾಂಬರವನ್ನುಟ್ಟು ಗೋ-|
ವಿಂದನಾಡಿದಾಟಗಳನು ಪ್ರಬಂಧಗೀತಗಳ ಮಾಡಿ |
ಚೆಂದ ಚೆಂದದಲಿ ಪಾಡಿದಳು ಮೊಸರ ಮಥನದಲಿ ತನ್ನ |
ಕಂದನ ಅದ್ವಿತೀಯ ಅಪ್ರಮೇಯಾಗಮ್ಯ ಗೋಚರನೆಂದು |
ನಂದವ್ರಜವೆತ್ತ ಉಡುಪಿಯ ಕೃಷ್ಣನ ಮಹಿಮೆ ಯೆತ್ತಲೆಂದು |
ವೃಂದಾರಕವಂದ್ಯ ಪುರಂದರವಿಠಲನೆ ಬಲ್ಲನೆನುತಿರೆ 2
ತ್ರಿವಡೆ ತಾಳ
ಪೊಂಬಟ್ಟೆ ಪಾಲ್ಮೊಸರಿಂದಲಿ ತೋದಿದೆ |
ಕಂಬು ಕಂಧರ ಕೆನೆ-ಬೆಣ್ಣೆಯ ಲೊರೆದಿದೆ |
ಅಂಬುಜನಾಭ ನೀ ಎಲ್ಲೆಲ್ಲಿ ತುಡುತಿಂದೆ |
ಎಂಬ ಗೋಪಿಗೆ ಕೃಷ್ಣ ಅಂಜುತಿದ್ದುದ ಕಂಡೆ |
ಅಂಬುಜ ಭವ ಪಿತ ಈ ಉಡುಪಿಯ ಕೃಷ್ಣ |
ತಾಂ ಬಾಲಕನಾದ ಪುರಂದರವಿಠಲ 3
ಅಟತಾಳ
ದೇವತರುವು ನಮ್ಮ ದೇವ ಕೊಳಲನೂದೆ |
ದೇವನಾರಿಯರುಟ್ಟ ದೇವಾಂಗದುಗುಲವ |
ಆವ ಸುಸ್ವರವೊ ಆವ ಸುಜಾತಿಯೊ |
ಆವ ಮೂಚ್ರ್ಛನವೊ ಆವ ಸುನಾದವೊ |
ದೇವ ಪುರಂದರವಿಠಲನಂಘ್ರಿಗಳಾಣೆ |
ಈ ಉಡುಪಿಯ ಕೃಷ್ಣನಾದಿ ಮೂರುತಿ ತಪ್ಪಾ 4
ಆದಿತಾಳ
ಒಂದು ಕೈಯಲಿ ಕಡೆಗೋಲು ಮ |
ತ್ತೊಂದು ಕೈಯಲಿ ಕಡೆವ ನೇಣು |
ನಿಂದು ತಾಯ ಮೊಗವಾ ನೋಡಿ |
ಕಂದನ ಕಂದ ನಲಿದಾಡುತ ಧಿಂ ಧಿಂ ಧಿಂ |
ಧಿಂ ಧಿತ ಮುದ್ದು ಪುರಂದರವಿಠಲ |
ಉಡುಪಿಯ ಕೃಷ್ಣ 5
ಜತೆ
ಉಡುಪಿಯ ಸಿರಿ ಕೃಷ್ಣ ಪುರಂದರವಿಠಲ |
ಬಿಡೆನೊ ಬಿಡೆನೊ ನಿನ್ನ ಚರಣಕಮಲವ ||
No comments:
Post a Comment