Thursday, 12 December 2019

ಅಂಜುವೆ ನಾನೀ ಸಿಂಹದ ಮೊಗದವ anjuve naa simhada mogadava

ಅಂಜುವೆ ನಾನೀ ಸಿಂಹದ ಮೊಗದವ |
ಹುಂಕರಿಸುವೆ ಮೊರಿದೊಮ್ಮೊಮ್ಮೊ |
ಅಂಜುವೆ ನಾನೀ ಕೋಪಾಟೋಪದವ |
ಗುಡಗುಡಿಸುವೆ ಮೊರೆದೊಮ್ಮೊಮ್ಮೊ |
ಅಂಜುವೆ ನಾನೀ ಕಿವಿಯ ಮೇಳವಿಸಿ
ಮೆಲ್ಕವಿದೆರಗುವೆ ಮೊರದೊಮ್ಮೊಮ್ಮೊ |
ಅಂಜುವೆ ನಾನೀ ಕುಡುದಾಡೆಗಳ |
ಕಿಡಿ ಕಿಡಿ ಕಿಡಿಗೆದರಿಸುವೆ ಮೊರೆದೊಮ್ಮೊಮೊ |
ಅಂಜುವೆ ನಾನೀ ತೆರವಾಯ ತರೆಯುತ
ಗಹಗಹಿಸುವೆ ಮೊರೆದೊಮ್ಮೊಮ್ಮೊ |
ಅಂಜುವೆ ನಾನೀ ಸಿರಿಮುದ್ದು ನರÀಸಿಂಹ
ಪುರಂದರವಿಠಲ ನೀನು ಉರಿಮೋರೆ ದೈವವೆ ಅಂಜುವೆ 1
ಮಟ್ಟತಾಳ
ಹಿರಣ್ಯಕಶಿಪುವಿನ ಉದರವ ಬಗಿದ ಬಳಿಕ |
ಕರುಳುಮಾಲೆಯ ಕಿತ್ತು ಕೊರಳಲಿಕ್ಕಿದ ಬಳಿಕ |
ಉರಿಯನುಗುಳಲೇತಕೆ ಸಿರಿಯ(ಸು)ನುಡಿಸಲೇತಕೆ |
ಹರ-ಬೊಮ್ಮಾದಿಗಳನ್ನು ಸರಕುಮಾಡಲೇತಕೆ |
ಸಿರಿಮುದ್ದು ನರಸಿಂಹ ಪುರಂದರವಿಠಲ
ಪ್ರಹ್ಲಾದದೇವ ಬಂದರೆ ಕರೆದು ಮುದ್ದಾಡಲೇತಕೆ 2
ತ್ರಿವುಡೆ ತಾಳ
ಅಟ್ಟಹಾಸಕಬುಜಜಾಂಡ ಕಟ್ಟಾಹ ಪ್ರತಿಧ್ವÀ್ವನಿಗೊಡುತಲಿದೆ |
ಮೆಟ್ಟಿದಳೆ ತಲೆ ಕೆಳಗಾಗುತಲಿದೆ |
ಬೆಟ್ಟಗಳೈಸೂ ಉರುಳುರುಳಿ ಬೀಳುತಿವೆ |
ದಿಟ್ಟ ಮುದ್ದು ನರಸಿಂಹ ಪುರಂದರವಿಠಲನೆ
ಕಟ್ಟರಸು ಕಾಣಿರೊ 3
ಅಟತಾಳ
ಉರಿಸಾಗರಗಳ ಸುರಿದು ನಾಲಗೆ ನೀಡೆ |
ಚರಾಚರಂಗಳು ಚಾರಿವರಿವುತಲಿತ್ತು |
ಬ್ರಹ್ಮಾಂಡವಂದೇ ಸಿಡಿದು ಹೋಗುತಿತ್ತು |
ಬ್ರಹ್ಮಪ್ರಳಯವಂದೇ ಆಗಿಹೋಗುತಿತ್ತು |
ಸಿರಿಮುದ್ದು ನರಸಿಂಹ ಪುರಂದರವಿಠಲ |
ಪ್ರಹ್ಲಾದದೇವ ಬಂದು ನಿಲಿಸದಿದ್ದರೆ |
ಬ್ರಹ್ಮಾಂಡವಂದೇ ಸಿಡಿದುಹೋಗುತಿತ್ತು 4
ಏಕತಾಳ
ಹಿರಣ್ಯಕಶಿಪುವಿನುದರವÀ ಬಗಿದು ಉಗುರಲಿ |
ಸರಸವಾಡಿದಿರಾ ಮೈಮುಟ್ಟಿ ಸರಸವಾಡಿದಿರಾ |
ಸಿರಿಮುದ್ದು ನರಸಿಂಹ ಪುರಂದರವಿಠಲ |
ಸರಸವಾಡಿದಿರಾ? 5
ಜತೆ
ಸಿರಿಮುದ್ದು ನರಸಿಂಹ ಪುರಂದರವಿಠಲ |
ಶರಣ ಪ್ರಹ್ಲಾದ ಸಂರಕ್ಷಕ ಜಯಜಯ ||

No comments:

Post a Comment