Wednesday, 11 December 2019

ರಾಘವೇ೦ದ್ರ ಗುರುರಾಜಾ ಸುತೇಜಾ raghavendra gururaja suteja

ರಾಘವೇ೦ದ್ರ ಗುರುರಾಜಾ ಸುತೇಜಾ            || ಪ ||
ಸಾನುರಾಗದಿ ನಿನ್ನ ಧ್ಯಾನ ಮಾಡದ
ಹೀನ ಮಾನವವಲ್ಲೆ ಅನುಮಾನವಿಲ್ಲದೆ ನಾ
ಮಾನಗೈಯಲಿಬೇಕೆಂದನುಮಾನದಲಿ ನಿ
ಧಾನಿಸಲಾಗೆ ಬಂದು ಸತ್ವರದಿಂದ
ನೀನೆ ಹೃದಯದಿ ನಿಂದು ಆ ಕ್ಷಣ ಎನ್ನ
ಜ್ಞಾನಾಂಧಕಾರಕೆ ಭಾನುರೂಪನಾದಿ            || ೧ ||
ಕರುಣಾಸಾಗರ ನಿನ್ನ ಚರಣ ಸೋಕಲು – ಲೋಹ
ಪರಶು ತಾಕಲು ಚಾಮಿಕರನಾದ
ತೆರೆ ಎನ್ನ ದುರಿತರಾಶಿಯ ತರಿದು – ದೂತನ ಮೇಲೆ
ಪರಮಾನುಗ್ರಹ ಗರೆದು ಪೊರೆದೆನೆಂಬ ಬಿರುದು
ಲೋಕದಿ ಮೆರೆದು ಸಾರುತಲಿದೆ
ಪರಮಹಂಸ ಗುರು                || ೨ ||
ಶ್ರೀಶಕೇಶವಿಠ್ಠಲನ ಕರುಣಾವಿಲಾಸ
ದಿ ಸುಖಿಸುವರೀ ಸಮಯದಲೆನ್ನ
ದೋಷ ವಿಚಾರಿಸದೆ ಮಮತೆಯಿಂದ
ಪೋಷಿಪರೆಂದರಿದೆ ಕಂಡ ಕಡಿ
ಆಶೆಯಿಂದಲೆ ಬರಿದೆ ಚರಿಸಲು ಉ
ದಾಸಿಸದೆಲೆ ಪೊರೆದು ಸುಕೃತ                || ೩ ||

No comments:

Post a Comment