Tuesday, 17 December 2019

ಕೂಸಿನ ಕಂಡೀರ್ಯಾ , ಗುರು ಮುಖ್ಯಪ್ರಾಣನ ಕಂಡೀರ್ಯಾkusina mandir mukhya prana

ಕೂಸಿನ ಕಂಡೀರ್ಯಾ , ಗುರು
ಮುಖ್ಯಪ್ರಾಣನ ಕಂಡೀರ್ಯಾ ||ಪ||
ಬಾಲನ ಕಂಡೀರ್ಯಾ
ಬಲವಂತನ ಕಂಡೀರ್ಯಾ ||ಅ.ಪ ||
ಅಂಜನೆಯುದರದಿ ಪುಟ್ಟಿತು ಕೂಸು
ರಾಮನ ಚರಣಕೆ ಎರಗಿತು ಕೂಸು
ಸೀತೆಗೆ ಉಂಗುರ ಕೊಟ್ಟಿತು ಕೂಸು
ಲಂಕಾಪುರವನೆ ಸುಟ್ಟಿತು ಕೂಸು ||
ಬಂಡಿ ಅನ್ನವನುಂಡಿತು ಕೂಸು
ಬಕನ ಪ್ರಾಣವ ಕೊಂದಿತು ಕೂಸು
ವಿಷದ ಲಡ್ಡುಗೆ ಮೆದ್ದಿತು ಕೂಸು
ಮಡದಿಗೆ ಪುಷ್ಪವ ಕೊಟ್ಟಿತು ಕೂಸು ||
ಮಾಯಾವಾದಿಗಳ ಗೆದ್ದಿತು ಕೂಸು
ದ್ವೈತಮತವನುದ್ಧರಿಸಿತು ಕೂಸು
ಮಧ್ವರಾಯರೆಂಬ ಪೆಸರಿನ ಕೂಸು
ಪುರಂದರವಿಠಲನ ಪ್ರೇಮದ ಕೂಸು ||

No comments:

Post a Comment