ಹರಿ - ಹರರು ಸರಿಯೆಂಬ ಅರಿಯದe್ಞÁನಿಗಳು |
ಹರನ ಹೃದಯದೊಳಿರುವ ಹರಿಯ ತಾವರಿಯರು ಪ.
ಶರಧಿ ಮಥನದಲಂದು ಸಿಂಧುಸುತೆ ಬಂದಾಗ |
ಹರಿ - ಹರ - ವಿರಂಚಿ ಮೊದಲಾದ ಸುರರ ||
ನೆರೆ ಒರೆದು ನೋಡಿ ಶಂಕೆಯ ಬಿಟ್ಟು ಸಿರಿದೇವೀ
ಹರಿ ಸರ್ವಪರನೆಂದು ಮಾಲೆ ಹಾಕಿದಳು 1
ಹರಿನಾಮ ಕ್ಷೀರವದು ಹರನಾಮ ನೀರು ಅದು |
ಕ್ಷೀರ ನೀರೊಂದಾದುದಂತೆ ಇಹುದು ||
ಒರೆದಾಡಿ ಪರತತ್ತ್ವವರಿಯದಾ ನರ ತಾನು |
ಹರಿ - ಹರರು ಸರಿಯೆಂದು ನರಕಕೆಳಸುವನು 2
ಕ್ಷೋಣಿಯೊಳು ಬಾಣನ - ತೋಳುಗಳ ಕಡಿವಾಗ |
ಏಣಾಂಕಧರ ಬಾಗಿಲೊಳಗೆ ಇರಲು |
ಕಾಣರೇ ಜನರೆಲ್ಲ ಹರಿ ಪರನು ತಾನೆಂದು | ಪೂರ್ಣಗುಣ ಪುರಂದರವಿಠಲನೇ ಪರನು 3
No comments:
Post a Comment