ಹರಿ ಕೊಟ್ಟಕಾಲಕ್ಕೆ ಉಣಲಿಲ್ಲ |
ಹರಿ ಕೊಡದ ಕಾಲಕ್ಕೆ ಬಾಯಿಬಿಡುವೆಯೊ ಪ್ರಾಣಿ ಪ.
ಉಡಲಿಲ್ಲ ಉಣಲಿಲ್ಲ ಕೊಡಲಿಲ್ಲ ಧರ್ಮವ |
ಅಡಗಿಸಿ ಇಟ್ಟಿಹೆ ಮಣ್ಣೊಳಗೆ ||
ಬಡತನ ಬಂದು ಕಂಬಳಿ ಹೊದೆವಾಗ |
ತುಡುಗು ನಿನ್ನ ಜನ್ಮ ಸುಡು ಕಾಣೊ ಖೋಡಿ1
ಹುಗ್ಗಿಯು ತುಪ್ಪವು ಮನೆಯೊಳಗಿರಲಿಕ್ಕೆ |
ಗುಗ್ಗರಿಯನು ಮಾಡಿ ತಿನ್ನುವಿಯೊ ||
ವೆಗ್ಗಳವಾದ ಯಮಧೂತರು ಎಳೆವಾಗ |
ಬುಗ್ಗೆಯ ಹೊಯ್ಕೊಂಡು ಹೋದೆಯೊ ಖೋಡಿ2
ನಂಟರು - ಬಂಧುಗಳೂರೊಳಗಿರಲಿಕ್ಕೆ |
ಕುಂಟು ಸುದ್ದಿಗಳನು ಆಡುವೆ ನೀ ||
ಕಂಟಕರಾದ ಯಮದೂತರು ಎಳೆವಾಗ |
ನಂಟ ಪುರಂದರವಿಠಲನ ದ್ರೋಹಿ 3
Good one Sir
ReplyDelete