ಧ್ರುವತಾಳ
ಈ ವನದೆಡೆಗಳು ಈ ವನಲತೆಗಳುಈ ನದಿಪುಳಿನಗಳೀ ಶಶಿಶಿಲೆಗಳುಈ ಸುರತರು ನೆಳಲು ಶುಕಪಿಕರವಯಾಕೆ ಮಾಧವನ ಮರೆಯಲೀಯದಿವೆ ಕೆಳದಿಈ ಮುಗುಳುನಗೆಯ ಸೊಬಗಈ ಸುರತರು ನೆಳಲೀ ರತಿಯಈ ಸುರತವನರಿದ ಬಾಲೆಯರೆಂತೊಈ ಸುಗುಣಮಯ ರಂಗವಿಠಲನೆ ಕೆಳದಿ 1
ಮಠ್ಯತಾಳ
ಇನ್ನು ರಂಗನ ಸಂಗವು ಎತ್ತಣದು ಗೋಪಿಯರಿಗೆಮಧುರೆಯ ಮಾನಿನಿಯರ ಬಲೆಯಲ್ಲಿ ಸಿಲುಕಿದನಮಧುರೆಯ ಮಾನಿನಿಯರು ರತಿವಿದಗ್ಧರಾವಧುಗಳು ರಸಿಕ ನಮ್ಮ ರಂಗವಿಠಲ 2
ತ್ರಿಪುಟತಾಳ
ಇನ್ಯಾತಕೆ ರಂಗ ಇಲ್ಲಿಗೆ ಬಾಹಾಮಧುರಾಪುರಿಯರಸನಾದಮಲ್ಲರ ಕೊಂದ ಮಾವನ್ನ ಮಡುಹಿದಮಧುರಾಪುರಿಯರಸನಾದಅವನ ನೆನಹೆ ಸಾಕು ರಂಗವಿಠಲನಾ 3
ರೂಪಕತಾಳ
ಬಿಡುವರು ಅಧನರ ಗಣಿಕೆಯರು ನೆರೆಬಿಡುವದು ವಿಫಲ ತರುವ ದ್ವಿಜಗಣಬಿಡುವವು ಮೃಗ ದಳ್ಳುರಿಗೊಂಡಡವಿಯಬಿಡುವನು ಜಾರ ಪರವಧುವನು ನೆರೆದಿನ್ನುಇವು ದಿಟವಾಯಿತು ನಮ್ಮ ವಲ್ಲಭನೊಳುಅಕಟಾಕಟ ರಂಗವಿಠಲನು ಕರುಣಿಯೆ4
ಅಟ್ಟತಾಳ
ಕುಂದಕುಸುಮ ಶಶಾಂಕ ರಂಜಿತವೃಂದಾವನದಲ್ಲಿ ಮಂದಮಾರುತ ಬರಲು ನಲಿದನು ಅರ-ವಿಂದ ನಯನನು ಹಾ ಹಾಕಂದಿದೆವು ಕುಂದಿದೆವು ನಾವುಕಂದರ್ಪನ ಶರದಟ್ಟುಳಿಗೆ ಹಾಇಂದುಮುಖಿಯರ ವೃಂದದೊಳಗೆ ಕೃಷ್ಣಾಅಂದು ನಮ್ಮೊಡನಾಡಿದ ಪರಿಯನು ತಾನುಇಂದೊಮ್ಮೆಯಾದರೂ ನೆನೆವನೆ ಹಾ ಹಾಎಂದಿಗಾದರೂ ರಂಗವಿಠಲನಿಲ್ಲಿಗೆ ಬಹನೆ 5
ಝುಂಪೆತಾಳ
ಪೊಂದೇರದೆಲ್ಲಿಯದವ್ವಾ ಬಂದಿದೆ ವ್ರಜದೊಳಗೆಅಂದಿನಕ್ರೂರನೆಂಬ ಕ್ರೂರನು ಮರಳಿ ಬಂದನಾನಮ್ಮ ಕರೆದೊಯ್ಯಲಿಬೇಕೆಂದುಅಂದೆಮ್ಮ ಕೊಂದಇಂದ್ಯಾರ ಕೊಲ್ಲಲು ಬಂದಕೊಂದುಕೊಳ್ಳಲಿ ತಮ್ಮ ಹಿರಿಯರನು ಹರಲಿಗಅಂದೆಮ್ಮನಗಲಿಸಿದ ರಂಗವಿಠಲನಾ 6
ಏಕತಾಳ
ಹೆತ್ತ ತಾಯಿ ತಂದೆಯರ ನೋಡಲೆಂದುಇತ್ತಲಟ್ಟಿದನೆ ಉದ್ಭವ ನಿನ್ನ ಗೋವಳಾಮತ್ತ್ಯಾರುಂಟು ವ್ರಜದಲ್ಲಿ ನೆನೆವರುಹತ್ತಿರಕೆ ತನ್ನವರಲ್ಲಿ ತಾ ಬಿಡುವನೆಅರ್ಥಕೃತ ಸ್ನೇಹ ನಮ್ಮೊಡನೆ ಮಾಡಿದ ಕೃಷ್ಣಮತ್ತಳಿಗೆ ಕುಸುಮದ ನೇಹದಂತೆಶಕ್ತಿ ಎಮ್ಮಳುಂಟು ರಂಗವಿಠಲಗೆ 7
ಝಂಪೆತಾಳ
ಪರಮ ಸುಖದಾಸೆ ಈತನ ಸೇವೆ ಅಲ್ಲವೆಒರೆದಳೆ ಪಿಂಗಳೆ ಜನರಿಗೆ ಹಿತವನುಅರಿದರಿದು ಬಿಡುವ ನಾವು ನರಪಶುಗಳಲ್ಲವೆಸಿರಿಮಣಿ ಬಿಡನು ನಮ್ಮ ರಂಗವಿಠಲನ್ನ 8
ಏಕತಾಳ
ಎಮ್ಮ ತನುಮನ ತನ್ನಧೀನವಲ್ಲೆಅನ್ಯವರಿಯೆವು ತನ್ನರಿದಂತೆ ಮಾಡಲಿಎಮ್ಮನವು ತನ್ನಧೀನವಲ್ಲೆಅನ್ಯವರಿಯೆವು ತನ್ನರಿದಂತೆ ಮಾಡಲಿನಮ್ಮ ರಂಗವಿಠಲರೇಯಗೆಇನ್ನು ಸಲೆ ಮಾರುಹೋದೆವೆ ಕೆಳದಿ9
ಜತೆ ಅವನ ಹಂಬಲವೆಮಗೆ ಜೀವನವವ್ವಾ ಭುವನಮೋಹನ ರಂಗವಿಠಲನು ಕರುಣಿಯೆ
No comments:
Post a Comment