ನಿನ್ನಾಧೀನ ಶರೀರ ಕರಣ ಚೇಷ್ಟೆಗಳೆಲ್ಲನಿನ್ನಾಧೀನ ಬಂದ ಮೋಕ್ಷ ನಿರಯಗಳುನಿನ್ನಾಧೀನ ಯೋಗ್ಯತೆ ಸಾಧನ ಸಾಧ್ಯಗಳೆಲ್ಲನಿನ್ನಾಧೀನ ಸುಕೃತ ದುಷ್ಕøತ ಫಲವು
ನಿನ್ನಾಧೀನ ಚರಾಚರವೆಂದು ಶೃತಿ ಸಾರುತಲಿವೆಇಂತು ಪುಣ್ಯ ಪಾಪವೆಲ್ಲ ನಿನ್ನ ಲೇಪಿಸವೊ ದೇವಎಂತು ಜೀವರನು ಪುಣ್ಯ ಪಾಪಂಗಳನುಣಿಸುವೆಅಂತರಾತ್ಮನೆ ನಿನ್ನ ಮಹಿಮೆಗೆ ನಮೋ ಎಂಬೆ 1
ಮಠ್ಯತಾಳ
ಮುನ್ನ ನಿನ್ನ ಚರಣ ಕಮಲವ ನಂಬಿದೆಭವಭವಂಗಳಲಿ ಬಂದೆನೋಪನ್ನಗೇಶಶಯನ ಶ್ರೀಹರೇಇನ್ನು ಬಿಡೆನೊ ಬಿಡೆನಯ್ಯಾ ಸಂಪನ್ನಎನ್ನ ಗುಣ ದೋಷವರಸದೆಇನ್ನು ಕಾಯೊ ರಂಗವಿಠಲ 2
ರೂಪಕ ತಾಳ
ಕರಣಗಳು ಬಿಡದೆ ತಮ್ಮ ತಮ್ಮವಿಷಯಂಗಳಿಗೆ ಎಳವುತಲಿವೆಎನ್ನ ಹರಣ ನಿನ್ನದು ಕರುಣಾಕರನೇಈ ಧರೆ ರವಣ ಮಾಣಿಸೋ ಹರಿಯೇನಿನ್ನ ಚರಣ ಭಕುತರ ಶರಣನಾದೆನುಹೊರೆವುದು ಎನ್ನ ರಂಗವಿಠಲರೇಯ 3
ಅಟ್ಟತಾಳ
ಬಂದು ಬಂದು ನಾನಾ ಭವದಲ್ಲಿ ಬೆಂದೆನಯ್ಯನಂದನಂದನ ಇಂದಿರಾನಂದಕುಂದ ಶುದ್ಧ ಧವಳದಂತೆ ಮಂದಹಾಸನಂದನ ಕಂದ ಇಂದಿರಾನಂದಇಂದೆನ್ನ ಸಲಹಯ್ಯ ರಂಗವಿಠಲ 4
ಏಕತಾಳ
ಹರಿಯೇ ನಿನ್ನ ಒಮ್ಮೆ ನೆನೆದವನರಕವ ಹೊಗನಂತೆಆನು ಒಮ್ಮೆ ಇಮ್ಮೆ ನೆನೆವೆನಯ್ಯಆನು ನಿನ್ನ ನಂಬಿದೆ ಕರುಣಿಗಳರಸಹೊರೆದೆನ್ನ ಕಾಯೊ ರಂಗವಿಠಲ 5
ಜತೆಮಂಗಳ ಮಹಿಮ ಭುಜಂಗಶಯನ ನಮೋ ಜಂಗುಳಿ ದೈವದ ಗಂಡ ರಂಗವಿಠಲ
No comments:
Post a Comment