ಹರಿಚಿತ್ತ ಸತ್ಯಾ ಹರಿಚಿತ್ತ ಸತ್ಯಾ
ನರಚಿತ್ತಕ್ಕೆ ಬಂದದ್ದು, ಲವಲೇಶ ನಡೆಯದು
ನರಚಿತ್ತಕ್ಕೆ ಬಂದದ್ದು, ಲವಲೇಶ ನಡೆಯದು
ಮಡದಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತ
ಮದುವ್ಯಾಗದಿರುವುದು ಹರಿಚಿತ್ತವೋ
ಮದುವ್ಯಾಗದಿರುವುದು ಹರಿಚಿತ್ತವೋ
ಕುದುರೆ ಅಂದಣ ಆನೆ ಬಯಸೋದು ನರಚಿತ್ತ
ಪದಚಾರಿಯಾಗೊದು ಹರಿಚಿತ್ತವಯ್ಯ
ಪದಚಾರಿಯಾಗೊದು ಹರಿಚಿತ್ತವಯ್ಯ
ವಿಧವಿಧ ಯಾತ್ರೆಯ ಬಯಸೋದು ನರಚಿತ್ತ
ಒದಗಿ ಬರುವ ರೋಗ ಹರಿಚಿತ್ತವೋ
ಒದಗಿ ಬರುವ ರೋಗ ಹರಿಚಿತ್ತವೋ
ಸದಾ ಅನ್ನದಾನವ ಬಯಸೋದು ನರಚಿತ್ತ
ಉದರಕ್ಕ ಅಳುವುದು ಹರಿಚಿತ್ತವೋ
ಉದರಕ್ಕ ಅಳುವುದು ಹರಿಚಿತ್ತವೋ
ಧರಣಿಯನು ಆಳಬೇಕೆಂಬುದು ನರಚಿತ್ತ
ಪರರ ಸೇವಿಸುವುದು ಹರಿಚಿತ್ತವೋ
ಪರರ ಸೇವಿಸುವುದು ಹರಿಚಿತ್ತವೋ
ಪುರಂದರ ವಿಠಲನ ಬಯಸೋದು ನರಚಿತ್ತ
ದುರಿತವ ಕಳೆವುದೆ ಹರಿಚಿತ್ತವೋ
ದುರಿತವ ಕಳೆವುದೆ ಹರಿಚಿತ್ತವೋ
No comments:
Post a Comment