Sunday, 6 October 2019

ನಾನೇಕೆ ಬಡವನು Naaneke Badavanu

ನಾನೇಕೆ ಬಡವನು ನಾನೇಕೆ ಪರದೇಶಿ
ಶ್ರೀನಿಧೇ ಹರಿಯೆನಗೆ ನೀನಿರುವ ತನಕ
ಹುಟ್ಟಿಸಿದ ತಾಯ್ತಂದೆ ಇಷ್ಟಮಿತ್ರನು ನೀನೇ
ಅಷ್ಟಬಂಧುಬಳಗ ಸರ್ವ ನೀನೇ
ಪೆಟ್ಟಿಗೆ ಒಳಗಿನ ಅಷ್ಟಾಭರಣ ನೀನೆ
ಶ್ರೇಷ್ಟಮೂರುತಿ ಕೃಷ್ಣ ನೀನಿರುವ ತನಕ
ಒಡಹುಟ್ಟಿದವ ನೀನೆ ಒಡಲಿಗ್ಹಾಕುವ ನೀನೇ
ಉಡಲು ಹೊದೆಯಲು ವಸ್ತ್ರ ಕೊಡುವ ನೀನೇ
ಮಡದಿ ಮಕ್ಕಳನೆಲ್ಲ ಕಡೆ ಹಾಯಿಸುವ ನೀನೇ
ಬಿಡದೆ ಸಲಹುವ ಒಡೆಯ ನೀನಿರುವತನಕ
ವಿದ್ಯೆ ಹೇಳುವ ನೀನೆ ಬುದ್ಧಿ ಕಲಿಸುವ ನೀನೆ
ಉದ್ಧಾರಕರ್ತ ಮಮ ಸ್ವಾಮಿ ನೀನೆ
ಮುದ್ದುಸಿರಿ ಪುರಂದರ ವಿಠಲ ನಿನ್ನಡಿಮೇಲೆ
ಬಿದ್ದುಕೊಂಡಿರುವ ನನಗೇತರ ಭಯವೋ

No comments:

Post a Comment