ಅಂತರಂಗದಲ್ಲಿ ಹರಿಯ ಕಾಣದವ
ಹುಟ್ಟು ಕುರುಡನೊ
ಸಂತತ ಶ್ರೀಕೃಷ್ಣಾ ಚರಿತೆ ಕೇಳದವ
ಜಡಮಾತಿ ಕಿವುಡನೋ ಎಂದೆಂದಿಗೂ
ಕಮಲನಾಭನ ಪಾಡಿ ಪೊಗಳದ ಸಂಗೀತ
ಗಾರ್ದಭ ರೋಧನವೋ
ಮಮತೆಯಿಂದಲಿ ಕೇಶವಗೆ ನಮಸ್ಕಾರ
ಮಾಡದವ ಮೃಗವೋ ಎಂದೆಂದಿಗೂ
ಕರಿರಥ ತುರುಗ ಇರಲು ಬಿಟ್ಟು ಕೆಡಹುವ
ಕತ್ತೆಯೆ ನಲಿಬೇಡವೋ
ಪರಮಪದವನೀವ ಸಿರಿಕೃಷ್ಣನಿರಲಾಗಿ
ನರರ ಸೇವಿಸಬೇಡವೊ ಎಂದೆಂದಿಗೂ
No comments:
Post a Comment