ಅಂತರಂಗದಲಿ ಹರಿಯ ಕಾಣದವ ತಾ ಹುಟ್ಟುಗುರುಡನೊ
ಸಂತತ ಶ್ರೀ ಕೃಷ್ಣಚರಿತೆ ಕೇಳದವ ಜಡಮತಿಯೆಕಿವುಡನೊ ಎಂದೆಂದಿಗೂ ಪ.
ಹರುಷದಿಂದಲಿ ಮುರಹರನ ಪೂಜೆಯ ಮಾಡದವನೆ ಕೈ ಮುರಿದವನೊ
ಕುರುವೀರ ಸೂತನ ಮುಂದೆ ಕೃಷ್ಣ ಎಂದುಕುಣಿಯದವನೆ ಕುಂಟನೊ ||
ನರಹರಿ ಪಾದೋದಕ ಧರಿಸದ ಶಿರ ನಾಯುಂಡಹಂಚು ಕಾಣೊ
ಸುರವರ ಕೃಷ್ಣ ಪ್ರಸಾದವಿಲ್ಲದ ಊಟ ಸೂಕರ ಭೋಜನವೋ 1
ಅಮರೇಶ ಕೃಷ್ಣಗರ್ಪಿತವಲ್ಲದ ಕರ್ಮ ಅಸತಿಯ ವ್ರತನೇಮವೊ
ರಮೆಯರಸಗೆ ಪ್ರೀತಿಯಿಲ್ಲದ ವಿತ್ತವು ರಂಡೆ ಕೊರಳ ಸೂತ್ರ
ಕಮಲನಾಭನ ಪೊಗಳದ ಸಾರ ಸಂಗೀತ ಗಾರ್ದಭರೋದನವೊ
ಮಮತೆಯಿಂದಲಿ ಕೇಶವಗೆ ನಮಸ್ಕಾರ ಮಾಡದವನೆ ಮೃಗವೊ 2
ಜರೆ ಹುಟ್ಟು ಮರಣವ ತಡೆವ ಸುದ್ದಿಯ ಬಿಟ್ಟುಸುರೆಯ ಸುರಿಯ ಬೇಡವೊ
ಸುರಧೇನು ಇರಲಾಗಿ ಶ್ವಾನನ ಮೊಲೆಹಾಲ ಕರೆದು ಕುಡಿಯಬೇಡವೊ
ಕರಿ ರಥ ತುರಗವೇರಲು ಇದ್ದು ಕೆಡಹುವ ಕತ್ತೆ ಏರಲಿಬೇಡವೊ
ಪರಮ ಪುರುಷ ಪುರಂದರವಿಠಲನಿರಲು ನರರ ಭಜಿಸಬೇಡವೊ 3
No comments:
Post a Comment