Thursday, 19 March 2020

ಪ್ರಾಣನಾಥ ಪಾಲಿಸೋ ನೀ ಎನ್ನ praananatha paaiso enna

  ಪ್ರಾಣನಾಥ ಪಾಲಿಸೋ ನೀ ಎನ್ನ ||ಪ||
ಜಾಣ ಲಕ್ಷ್ಮಣನಿಗೆ ಜೀವವಿತ್ತ ಘನ್ನ | ವಾಣಿಪತಿ ಸಮದಾವನೆ | ರಾಣಿ ಭಾರತಿರಮಣನೆ ||೧||
ಅಂಜನಾದೇವಿಯ ಆತ್ಮಜನೆ ಕಂಜಾಕ್ಷರಾಮನ ದೂತನೆ ||೨||
ಪಾಂಡುಸುತ ಭೂಮಂಡಲೇಶ | ಪಾಂಡುರಂಗ ಭಕ್ತರ ಪೋಷ ||೩||
ಮೂಲ ಗುರು ಮಧ್ವರಾಯರಾಗಿ | ಮೂಲ ದೈತ್ಯರ ನೀಗಿ ||೪||
ನರಹರಿ ಪುರಂದರ ವಿಠಲನ ಕೀರ್ತಿ ನರರಿಗೆ ತೋರಿದ ನಿಜಗುರು ಮೂರ್ತಿ ||೫||

No comments:

Post a Comment