Thursday, 19 March 2020

ಈತನೆ ಲೋಕಗುರು ವೇದವಿಖ್ಯಾತ eetane loka guru veda vikhyata

ಈತನೆ ಲೋಕಗುರು ವೇದವಿಖ್ಯಾತ || ಪ ||
ಭೂತಳದಿ ಶ್ರೀರಾಮ ದೂತನೆಂಬಾತ || ಅಪ ||
ಅಂದು ಹನುಮಂತನಾಗಿ ಅಖಿಳ ದಿಕ್ಕೆಲ್ಲವನು
ಒಂದು ನಿಮಿಷದಲಿ ಪೋಗಿ ಉದಧಿ ಲಂಘಿಸಿದ
ಇಂದೀವರಾಕ್ಷಿಗೆ ವಂದಿಸಿ ಮುದ್ರಿಕೆಯನಿತ್ತು
ಬಂದು ರಾಮರ ಪಾದಕೆರಗಿ ನಿಂದಾತ || ೧ ||
ಅರ್ಜುನಗೆ ಅಣ್ಣನಾಗಿ ಅಂದು ದುರ್ಯೋಧನನ
ಲಜ್ಜೆಯನೆ ಕೆಡಿಸಿ ಶದ್ರಥಿಕರನು ಗೆಲಿದ
ಮೂಜಗವು ಮೆಚ್ಚಲು ಮುನ್ನ ಮಾಗಧನ ಸೀಳಿದ
ಸಜ್ಜನ ಪ್ರಿಯ ಭೀಮಸೇನ ನೆಂಬಾತ || ೨ ||
ಮೂರಾರು ಎರಡೊಂದು ಮೂಢಮತಗಳ ಜರಿದು
ಸಾರ ಮಧ್ವ ಶಾಸ್ತ್ರವನು ಸಜ್ಜನರಿಗೆರೆದು
ಕೂರ್ಮ ಶ್ರೀಹಯವದನನ ಪೂರ್ಣ ಸೇವಕನಾದ
ಧೀರ ಮಧ್ವಾಚಾರ್ಯ ಲೋಕದೊಳು ಮೆರೆದ || ೩ ||

No comments:

Post a Comment