Sunday, 29 March 2020

ಏತರ ಚೆಲುವು-ರಂಗಯ್ಯ ಪಏತರ


ಏತರ ಚೆಲುವು-ರಂಗಯ್ಯ ಪಏತರ ಚೆಲುವ ರಂಗಯ್ಯ ಶ್ರೀಹರಿಯೆಂಬ |ಮಾತಿಗೆ ಬರಿದೆ ಮರುಳಾದೆನಲ್ಲದೆ ಅ.ಪದೇಶವಾಸಗಳುಳ್ಳೊಡೆ-ತಾ ಕ್ಷೀರವಾ |ರಾಶಿಯೊಳಗೆ ಮನೆ ಕಟ್ಟುವನೆ? ||ಹಾಸುವ ಮಂಚವುಳ್ಳೊಡೆ-ಶ್ರುತಿಹೀನ |ಶೇಷನ ಮೇಲೆ ಮಲಗುವೆನೆ? 1
ಹಡೆದ ತಾಯಿ ತನಗುಳ್ಳೊಡೆ-ರಂಗ |ಹೊಡೆದು ಕರು-ತುರುಗೊಂಡು ಬಾಳುವನೆ? ||ಮಡದಿಯರುಳ್ಳೊಡೆ ಅಡವಿಯೊಳಾಡುವ |ಹುಡುಗಿಯರ ಸಂಗ ಮಾಡುವನೆ? 2
ಬುದ್ದಿ ಪೇಳುವ ಪಿತನುಳ್ಳೊಡೆ-ರಂಗ |ಕದ್ದು ಬೆಣ್ಣೆ ದಧಿ ಮೆಲ್ಲುವನೆ ? ||ನಿರ್ಧಾರ ವಾಹನವುಳ್ಳೊಡೆ-ಹಾರುವ |ಹದ್ದಿನ ಹೆಗಲೇರಿ ಬಾಹನೆ?-ರಂಗ 3
ಸಿರಿಯುಳ್ಳೊಡೆ ತಾನು ಬಲಿಯ ಮನೆಗೆ ಪೋಗಿ |ಧರೆಯ ದಾನಕ್ಕೆ ಕೈಯನೊಡ್ಡುವನೆ? ||ಗರುವ ತಾನಾದರೆ ಪಾಂಡುಕುಮಾರನ |ಧುರದ ಬಂಡಿಯ ಬೋವನಾಗುವನೆ? 4
ಮದನ ಜನಕ ನಿಚ್ಚ ಚೆಲುವನೆಂತೆಂಬೆನೆ | ಮದದಿಂದ ಕುಜ್ಜೆಯ ಕೂಡುವನೆ? ||ಪದುಮನಾಭ ಸಿರಿ ಪುರಂದರವಿಠಲ |ಗದುಗಿನ ವೀರನಾರಾಯಣ-ರಂಗ 5


No comments:

Post a Comment