Sunday, 29 March 2020

ಏನ ಮಾಡಲಿ ಮಗನೆ ಏಕೆ ಬೆಳಗಾಯಿತು |


ಏನ ಮಾಡಲಿ ಮಗನೆ ಏಕೆ ಬೆಳಗಾಯಿತು |
ಮಾನಿನಿಯರು ಬಂದು ಮಾನ ಕಳೆಯುವರು ಪ
ಹಾಲು, ಮೊಸರು, ಬೆಣ್ಣೆ, ಕದ್ದನೆಂತೆಂಬುವರು |
ಮೇಲಿಟ್ಟ ಕೆನೆಯನು ಮೆದ್ದನೆಂಬುವರು ||
ಬಾಲರನೆಲ್ಲರ ಬಡಿದನೆಂಬರು ಎಂಥ |
ಕಾಳು ಹೆಂಗಸು ಇವನ ಹಡೆದಳೆಂಬುವರೊ 1
ಕಟ್ಟಿದ ಕರುಗಳ ಬಿಟ್ಟನೆಂತೆಂಬರೊ |
ಮೆಟ್ಟಿ ಸರ್ಪನ ಮೇಲೆ ತುಳಿದನೆಂಬುವರೊ ||
ಪುಟ್ಟ ಬಾಲೆಯರ ಮೋಹಿಸಿದನೆಂಬುವರೊ ಎಂಥ |
ಕೆಟ್ಟ ಹೆಂಗಸು ಇವನ ಹಡೆದಳೆಂಬುವರೊ 2
ಗಂಗಾಜನಕ ನಿನ್ನ ಜಾರನೆಂತೆಂಬರೊ |
ಶೃಂಗಾರ ಮುಖ ನಿನ್ನ ಬರಿದೆ ದೂರುವರೊ ||
ಮಂಗಳಮಹಿಮ ಶ್ರೀ ಪುರಂದರವಿಠಲ |
ಹಿಂಗದೆ ಎಮ್ಮನು ಸಲಹೆಂತೆಂಬುವರೊ 3


No comments:

Post a Comment