Tuesday, 31 March 2020

ಕೊಟ್ಟು ಹೋಗೊ ಎನ್ನ ಸಾಲವ-ಕಣ್ಣ


ಕೊಟ್ಟು ಹೋಗೊ ಎನ್ನ ಸಾಲವ-ಕಣ್ಣ-|
ಬಿಟ್ಟರಂಜುವನಲ್ಲ ಹೊರು ಕಲ್ಲ ಕೃಷ್ಣ ಪ
ಕಾಲನೂರಿ ಅಡಿಯಿಟ್ಟರೆ-ಭೂ-|
ಪಾಲನಾಣೆ ನರಸಿಂಗನೆ ||
ಏಳು ವರ್ಷ ಬಡ್ಡಿ ಮೂಲಸಹಿತವಾಗಿ |
ತಾಳುವನಲ್ಲವೊ ತಿರುಕ ಹಾರುವನೆ 1
ಕೊರಳುಗೊಯ್ಕ ನೀನು ಸಾಲವ ತೆಗೆದು |
ತಿರುಗುವುದುಚಿತವೆ ವನವನವ ||
ಎರಡೇಳು ವರ್ಷಕೆ ಎನಗಿಂದು ಸಿಕ್ಕಿದೆ |
ಒರಳಿಗೆ ಕಟ್ಟದೆ ಬಿಡುವೆನೆ ಕೃಷ್ಣ 2
ಬತ್ತಲೆ ನಿಂತರೂ ಬಿಡುವೆನೆ ನಿನ್ನ |
ಉತ್ತಮ ಗುಣಗಳ ತೋರಿದೆ ||
ಹತ್ತಿದ್ದ ಕುದುರೆ ಸಹಿತವಾಗಿ ಹಿಡಿತಂದು |
ಚಿತ್ತದಿ ಕಟ್ಟುವೆ ಪುರಂದರವಿಠಲ 3


No comments:

Post a Comment