Sunday, 29 March 2020

ಏನು ಮರುಳಾದೆಯೇ ಎಲೆ ಭಾರತೀ


ಏನು ಮರುಳಾದೆಯೇ ಎಲೆ ಭಾರತೀ ಪ
ವಾನರ ಕುಲದೊಳಗೆ ಶ್ರೇಷ್ಠನಾದವಗೆ ಅ.ಪ
ಕಣ್ಣಿಲ್ಲದವಳ ಗರ್ಭದಲಿ ಜನಿಸಿ ಬಂದು
ನಿನ್ನ ತೊರೆದು ಬ್ರಹ್ಮಚಾರಿಯಾದ ||
ಹೆಣ್ಣಿಗಾಗಿ ಪೋಗಿ ವನವ ಕಿತ್ತಾಡಿ |
ಉಣ್ಣ ಕರೆದರೆ ಎಂಜಲೆಡೆಯನೊಯ್ದವಗೆ 1
ಹುಟ್ಟಿದನು ಗುರುತಲ್ವಗಾಮಿಯಾ ವಂಶದಲಿ |
ನಟ್ಟಿರುಳೊಳೊಬ್ಬ ಅಸುರಿಯ ಕೂಡಿದ ||
ಹೊಟ್ಟೆಗೆಂತಲೆ ಹೋಗಿ ಭಿಕ್ಷದನ್ನವನುಂಡು |
ಅಟ್ಟ ಹಾಕುವನಾಗಿ ದಿನವ ಕಳೆದವಗೆ 2
ಮಂಡೆ ಬೋಳಾಗಿ ಭೂಮಂಡಲವ ತಿರುಗಿದ |
ಕಂಡವರು ಯಾರು ಈತನ ಗುಣಗಳ ||
ಪುಂಡರೀಕಾಕ್ಷ ಶ್ರೀ ಪುರಂದರವಿಠಲನ |
ಕೊಂಡಾಡುತಲಿ ಬೋರೆ ಮರದ ಕೆಳಗಿದ್ದವಗೆ 3


No comments:

Post a Comment