Wednesday, 8 January 2020

ಶಿವ ಮಹಾಗುರು shiva mahaguru


ಶಿವ ಮಹಾಗುರು ಸಹಜಾನಂದ ಭವಹರ ಮೃಡ ಬ್ರಹ್ಮಾನಂದ \\ಪ\\
ಭವಮೃಡ ಸಾಂಬ ಶಿವಾನಂದ  ದಶಭುಜ ಪಂಚವದನ ನೇತ್ರ 
 ದಳ ಪಂಚಕ ಮಂಗಳ ಗಾತ್ರ  ಭಸಿತವಿಲೇಪ ಸುಜನ ಸ್ತೋತ್ರ ಪಶುಪತಿ ಬಿಸಜಾಕ್ಷನ ಮಿತ್ರ \\1\\
ಸುರನದಿ ಶಿರದಲಿಟ್ಟಿಹನು ಸ್ಮರನ ಉರಿಗಣ್ಣಿಲಿಸುಟ್ಟಿಹನು 
 ಉರಗ ಭೂಷಣ ಕುಂಡಲದ್ವಯನ  ಪರಮ ಪುರಷ ಗೌರೀವರನ \\2\\
ಅಮರೇಂದ್ರಾದಿ ಪದಾರ್ಚಿತನು ಡಮರು ತ್ರೀಶೂಲ ಮೃಗಾಯುಧನು | 
ಶಮನ ಮಹಾ ಭಯ ಸಂಹರನು  ಸುಮನ ಸುಭಕ್ತರ ಪೊರೆವವನು \\3\\
ಗಜಚರ್ಮಾಂಬರಧರ ಯತಿ  ರಜನೀಪತಿ ಶೇಖರ ಗೋಪತಿ ಭಜಕ ಜನಗಳಾಂತರ 
ಸ್ಫೂರ್ತಿ ಅಜಸುರನುತ ಸಚ್ಚಿನ್ಮೂರ್ತಿ \\4\\
ಸಿದ್ಧರ ಮಡುವಿನೊಳಗೆ ವಾಸಾ  ಬದ್ಧ ಜೀವಂಗಳುದ್ಧರಿಪ ಈಶಾ | 
ಶುದ್ಧ ಲಕ್ಷಕೆ ಉಪದೇಶ| ಅದ್ವಯ ಗುರು ಶಂಕರ ವೇಷಾ \\5\\

No comments:

Post a Comment