ನೀನೆ ಪರಬ್ರಹ್ಮಾ ಸತ್ಯವು ನೀನೆ ಪರಬ್ರಹ್ಮಾ | ನೀನೆಪರಶಿವ ನೀನೆ ಪರತರ ನೀನೆ ಪರಮ ಪರ ನಿನ್ನಿಂದ ನೀನೈ ಪಅನೇಕ ಕೊಡಗಳೊಳು ರವಿ ತಾ | ಅನೇಕನೆನಿಸಿರಲು |ಅನೇಕ ವಾ ಘಟ ಉಪಾಧಿಯಳಿಯಲು | ಅನೇಕವೆಲ್ಲವು ಒಬ್ಬನೇ ನೀನೈ 1
ಸರ್ವಾಲಂಕಾರಾ ಕರಗಲು ಸರ್ವವು ಬಂಗಾರಾ | ಸರ್ವ ಜಗವೆಲ್ಲವು ನಿನ್ನೊಳಗಿರುವದು |ಸರ್ವ ರಹಿತ ನಿಜ ಶರ್ವನೆ ನೀನೈ 2
ಮಾಯಾ ಅವಿದ್ಯೆಯೊಳು ಶಿವ ಜೀವ ಕಾಯವು ಬಂದಿರಲು | ಮಾಯಾ ಅವಿದ್ಯೆಯ ಪರದೆಯು ಅಳಿಯಲು | ಕೇವಲ ಅತಿ ನಿಜ ಶಂಕರ ನೀನೈ 3
No comments:
Post a Comment