Tuesday, 7 January 2020

ಜಯದೇವ ಜಯದೇವ ಜಯ jayadeva jayadeva


ಜಯದೇವ ಜಯದೇವ ಜಯ ವೆಂಕಟೇಶ |ಭಯಕೃದ್ಭಯನಾಶನ ಶೇಷಾಚಲವಾಸ ||ಜಯ|| ಪ
ಕಲಿಯುಗದಲಿ ಪ್ರತ್ಯಕ್ಷ ಭೂವೈಕುಂಠೆನಿಸಿ |ಸುಲಭವು ತೋರಿದಿ ಭಕ್ತರ ಬಯಕೆ ಪೂರೈಸಿ |ನಳಿನ ಸಂಭವ ಜನಕ ಸನಕಾದಿ ಪೋಷೀ |ತಿಳಿಯದು ನಿಮ್ಮಯ ಮಹಿಮೆಯು ಸಚ್ಚಿತ್ಸುಖರಾಶೀ 1
ಹೊಳೆವ ಶಿರದಲಿ ಕಿರೀಟ ಮಕರ ಕುಂಡಲವೂ |ಎಳೆ ತುಳಸಿ ವನಮಾಲಿ ಕೊರಳಲಿ ಶೋಭಿತವೂ |ಶ್ರೀವತ್ಸ ಕೌಸ್ತುಭ ಮಣಿ ರತ್ನದ ಜಡವೂ |ಥಳ ಥಳಿಪ ತೇಜಾ ಅಂಜನೀ ತನಯಾ2
ಮತ್ಸ್ಯ ಕೂರ್ಮ ವರಾಹ ನರಹರಿ ವಾಮನನೆ |ತುಚ್ಛ ಮಾಡಿದಿ ಯಮಪುರ ರಾಮ ರಾಘವನೆ ವತ್ಸಾ ಶಿರಿ ಶಂಕರ ಆತ್ಮಜನೆ || ಜಯ 3


No comments:

Post a Comment