Tuesday, 7 January 2020

ಎಂಥ ಮಹಿಮನು ನೋಡು entha mahimanu nodu


ಎಂಥ ಮಹಿಮನು ನೋಡು ನಮ್ಮ ಯಲಗೂರದ ಹನುಮಾ |ಸಂತತ ನೆನೆವರ ಚಿಂತಾಮಣಿ ನಿಜ ಶಾಂತ ಸದಾ ನಿಶ್ಚಿಂತ ಪರಾಕ್ರಮಾ ಪ
ಹುಟ್ಟುತಲಿ ಮಿತ್ರನ ತಿನಬೇಕೆಂದು ಥಟ್ಟನೆ ತಾ ಬಂದು |ಬೆಟ್ಟರಿಯ ಬೆನ್ನನೆ ಬೀಳಬೇಕೆಂದು | ಪುಟ್ಟರಿದಾನೆಂದು |ಮುಟ್ಟಿ ಬರಲುಕವ ನೆಟ್ಟನೆ ಹೊಯ್ಯಲು | ಧಿಟ್ಟ ಮರಪನೆಂದು ಧಿಟ್ಟನೆ ಧಿಟ್ಟ ಬಂದು1
ಅಂಜನಿಯ ಗರ್ಭದಲಿ ತಾ ಬಂದಾ | ಸಂಜೀವನಿ ತಂದಾ | ಕೆಂಜಡಿಯನ ಸ್ವರೂಪನು ಜಗದಾನಂದಾ ಸ್ವಾನಂದ ಕಂದಾ || ಮಂಜುಳ ಶಬ್ದ ಪ್ರಭಂಜನ ಕಪಿ ಜಗ ರಂಜಿತ ತೇಜಃ ಪುಂಜ ಸದಯದಾ 2
ಹರಿಸುತನು ಬ್ರಹ್ಮನೆ ತಾನೆ ಬಂದೂ ಕರವಿಟ್ಟನು ಇಂದೂ | ಪರಿಪರಿಯ ಶಕ್ತಿಯು ನಿನ್ನಲ್ಲಿಂದು ಗುಪ್ತಿರಬೇಕೆಂದು ಸ್ಥಿರಪದ ಕೊಟ್ಟೆ ವಜ್ರಾಂಗವನಿಂದೂ ವರದಾ-ಭಯನಿಟ್ಟು ತನುನಿಧಿ ತಂದೂ3
ರವಿತನಯನ ಭೆಟ್ಟಯನು ತಕ್ಕೊಂಡಾ ರಘುರಾಮರ ಕಂಡಾ | ಅವನಂಗುಲಿಯೊಳು ಮುದ್ರಿಯನಿತ್ತಾ ಪ್ರಚಂಡಾಬಹು ಬಾಹೋದ್ದಂಡಾ | ತವಕದಿ ಅಕ್ಷಯ ಕುವರನ ಮರ್ದಿಸಿ ಘವಿ ಘವಿಸುವ ಲಂಕಿಯದಾ ಕೆಂಡಾ 4
ರಕ್ಕಸರೆಲ್ಲರ ಕುಕ್ಕಿರಿದನು ಅದ್ಭುತಾ ಜಗಕಪಿ ಪ್ರಖ್ಯಾತಾ |ಮಿಕ್ಕರಗಳನೆಲ್ಲ ಪಾಡುವೆ ರಾಮನ ದೂತಾ ಶರಣರ ಸಂಪ್ರೀತಾಉಕ್ಕಿ ಹರುಷದಲಿ ಬೇಗ ಬಾರೊ ಬೇಗ ಬಾರೊನೀಲಮೇಘಶ್ಯಾಮಾ ಭಕ್ತರ ಪಾಲಿಪ ಮುಕ್ತರಮಾಡುವ ಶಂಕರನೀತಾ 5


No comments:

Post a Comment