Wednesday, 15 January 2020

ದೇವಕಿನಂದ ಮುಕುಂದ devkinandan mukunda


ದೇವಕಿನಂದ ಮುಕುಂದ ಪ
ನಿಗಮೋದ್ಧಾರ - ನವನೀತ ಚೋರ | ಖಗಪತಿ ವಾಹನ ಜಗದೋದ್ಧಾರ 1
ಶಂಖ - ಚಕ್ರಧರ - ಶ್ರೀ ಗೋವಿಂದ | ಪಂಕಜಲೋಚನ ಪರಮಾನಂದ 2
ಮಕರಕುಂಡಲಧರ - ಮೋಹನವೇಷ | ರುಕುಮಿಣಿವಲ್ಲಭ ಪಾಂಡುವಪೋಷ3
ಕಂಸಮರ್ದನ - ಕೌಸ್ತುಭಾಭರಣ | ಹಂಸ - ವಾಹನ ಪೂಜಿತ ಚರಣ4
ವರವೇಲಾಪುರ ಚೆನ್ನಪ್ರಸನ್ನ | ಪುರಂದರವಿಠಲ ಸಕಲಗುಣ ಪೂರ್ಣ5


No comments:

Post a Comment