Wednesday, 15 January 2020

ದಾರಿಯ ತೋರೊ ಮುಕುಂದ dariya toru mukund


ದಾರಿಯ ತೋರೊ ಮುಕುಂದ - ಹರಿ-|ನಾರಾಯಣ ಗೋವಿಂದ ಪ
ಬಂದೆನು ಬಹುಜ್ಮನದಲಿ -ನಾ-|ಬಂಧನದೊಳು ಸಿಲುಕುತಲಿ ||
ಮುಂದಿನದಾವುದು ಪಯಣ -ತೋರೊ-|ಇಂದು ನೀ ಇಂದಿರೆರಮಣ 1
ಗತಿಯಿಲ್ಲದವರಿಗೆ ನೀನೆ -ಸದ್-|ಗತಿಯೆಂದು ಸ್ತುತಿಮಾಡಿದೆನೊ ||
ಗತಿಯೆಂದು ನಂಬಿದೆ ನಿನ್ನ |ಸತುವ ತೋರು ನರಹರಿಯೆ ಗೋವಿಂದ2
ಮಡವಿನೊಳಗೆ ಧಮುಕಿದೆನೆ -ಇನ್ನು-ಕಡಹಾಯಿಸುವರ ನಾ ಕಾಣೆ ||
ಹಡೆದ ತಾಯಿ - ತಂದೆ ನೀನೆ -ಕೈ-|ಹಿಡಿದು ಸಲಹೊ ಎನ್ನೊಡೆಯ ಮುರಾರಿ3
ಮಿಕ್ಕಿ ಬರುವ ಹೊಳೆಯೊಳಗೆ -ನಾನು-|ಸಿಕ್ಕಿದೆ ನಡುನೀರೊಳಗೆ ||
ಕಕ್ಕುಲಾತಿ ನಿನಗಿರದೆ |ಭಕ್ತವತ್ಸಲ ನೀ ದಯಮಾಡೋ 4
ಕುಕ್ಷಿಯೊಳಗೆ ಇಂಬಿಟ್ಟು -ಎನ್ನ-|ರಕ್ಷಿಸಿ ಸಲಹಬೇಕು ||
ಅಕ್ಷಯ ಅನಂತ ಮಹಿಮನೆ - ನೀನು |ಪಕ್ಷಿವಾಹನನೆ ಪುರಂದರ ವಿಠಲ 5


No comments:

Post a Comment