Wednesday, 15 January 2020

ದಾರಿ ಯಾವುದಯ್ಯ ವೈಕುಂಠಕೆ daari yavudayya vaikuntake


ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯಾ ಪ
ದಾರಿ ಯಾವುದಯ್ಯಾ ದಾರಿ ತೋರಿಸು ಆಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ ಅ.ಪ
ಬಲುಭವದನುಭವದಿ ಕತ್ತಲೆಯೊಳು ಬಲು ಅಂಜುತೆ ನಡುಗಿ ||
ಬಳಲುತ ತಿರುಗಿದೆ ದಾರಿಯ ಕಾಣದೆ ಹೊಳೆಯುವ ದಾರಿಯ ತೋರೊ ನಾರಾಯಣ 1
ಪಾಪವ ಪೂರ್ವದಲಿ ಮಾಡಿದುದಕೆ ಲೇಪವಾಗಿರೆ ಕರ್ಮ
ಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆ ಶ್ರೀಪತಿ ಸಲಹೆನ್ನ ಭೂಪ ನಾರಾಯಣ 2
ಇನ್ನು ನಾ ಜನಿಸಲಾರೆ ಭೂಮಿಯ ಮೇಲೆ ನಿನ್ನ ದಾಸನಾದೆನೊ||
ಪನ್ನಗಶಯನ ಶ್ರೀ ಪುರಂದರ ವಿಠಲ ಇನ್ನು ಪುಟ್ಟಿಸದಿರೊ ಎನ್ನ ನಾರಾಯಣ 3


No comments:

Post a Comment