Wednesday, 18 December 2019

ಶ್ರೀ ಮಧ್ವರಾಯರ shree madhwarayara seve

ಶ್ರೀ ಮಧ್ವರಾಯರ ಸೇವೆ ದೊರಕುವುದು
ಜನುಮ ಸಫಲ ಕಾಣಿರೋ ಪ
ಶ್ರೀಮದಾನಂದ ತೀರ್ಥರ ಪಾದವ ನೆನೆವರು
ಸಾಮಾನ್ಯ ಸುರರು ಕಾಣಿ-ಬೊಮ್ಮನ ಆಣಿ ಅ.ಪ
ಜಗತು ಸತ್ಯವು ಅಲ್ಲ ಜಡ-ಜೀವ ಭೇದವಲ್ಲ
ಅಗುಣನು ಪರಬೊಮ್ಮನು-||
ಹೀಗೆ ನುಡಿವ ಜನರ ನಿಗಮಶಾಸ್ತ್ರದಿ ಗೆದ್ದು
ಜಗ ಸತ್ಯ ಸಗುಣ ಬ್ರಹ್ಮ ಎಂದು ಪೇಳುವ 1
ಹರಿ ಸರ್ವೋತ್ತಮ ನಿತ್ಯ ತರುವಾಯ ರಮಾದೇವಿ
ತರುವಾಯ ವಿಧಿಪ್ರಾಣರು
ಸರಸ್ವತಿ ಭಾರತಿ ಗರುಡ ಅನಂತ ರುದ್ರ
ತರುವಾಯ ಆರು ದೇವಿಗಳು 2
ಸೌಪರ್ಣಿ ವಾರುಣಿದೇವಿ ಅಪರ್ಣಾದೇವಿಯರು ಸಮರು
ದ್ವಿಪದಿ ಮನ್ವಾದಿಗಳು ||
ಈ ಪರಿ ತಾರತಮ್ಯ ಜಪ-ಧ್ಯಾನಾರ್ಚನೆಯಿಂದ
ಅಪವರ್ಗದನ ಸೇವೆಯ ಮಾಡಿರೊ ಎಂಬ3
ಒಂದೊಂದು ಯುಗದಲಿ ಅನಂತ ಸೇವೆಯ ಮಾಡಿ
ಚೆಂದದಿಂದಲಿ ಲಾಲಿಸಿ ||
ಇಂದಿರಾರಮಣ ಗೋವಿಂದನೇ ದೈವವೆಂದು |
ಸಂದೇಹವಿಲ್ಲದೆ ಸಾಧಿಸಿ-ಮಾಯೀ ಸೋಲಿಸಿ 4
ಹಿಮಗಿರಿಯಿಂದ ಸೇತುವೆಯ ಪರ್ಯಂತರ
ಭ್ರಮಿಸುತ ಸುಜನರಿಗೆ ||
ಕ್ರಮತತ್ತ್ವ ಬೋಧಿಸಿ ಕಮಲನಾಭನ ಮೂರ್ತಿ
ಕ್ರಮವರಿತು ಸ್ಥಾಪಿಸಿ ಪೂಜಿಸಿರೆಂದ 5
ಭೂತಳದೊಳು ರೌಪ್ಯಪುರದಿ ನೆಲಸಿ ಗೆದ್ದು
ಧಾತ್ರೀ ಮುದ್ರೆಯ ತೋರಿಸಿ ||
ಈತನೇ ಹನುಮಂತ ಈತನೇ ಭೀಮಸೇನ
ಈತನೇ ಭವಿಷ್ಯದ ಬ್ರಹ್ಮ ಜೀವೋತ್ತಮ 6
ಶ್ರೀಮದನಂತನೆ ಅನಂತಕಾಲಕೆಯೆಂದು
ಯಮಕ ಭಾರತ ತೋರಿಸಿ
ಸ್ವಾಮಿ ಸರ್ವಾಂತರ್ಯಾಮಿ | ಸರ್ವಗುಣಪೂರ್ಣನೆಂದು ಪ್ರೇಮಿ ಪುರಂದರ ವಿಠಲನ ದಾಸನಾದ 7

No comments:

Post a Comment