Wednesday, 18 December 2019

ಶ್ರೀ ಮದಾನಂದ ತೀರ್ಥ ಹನುಮ shree madanandteerth hanuma

ಶ್ರೀ ಮದಾನಂದ ತೀರ್ಥ ಹನುಮ | ಭೀಮ
ನಿನ್ನ ಸಮಾನ ಪುರುಷರು
ಈ ಮೂಜಗದೊಳಿಲ್ಲವೆಂದು ಶ್ರೀ ರಾಮ
ಸಹಭೋಜನವನೀಯನೆ? ಪ
ಹರಿವಿರಿಂಚಿ ಸಹಾಯದಿಂದ | ಹರನು
ತ್ರಿಪುರವನಳಿಯಲಾಗ |
ಬರಿದೆ ಕೊಂಡಾಡಿದರು ಸರ್ವರು |
ಅರಿಯದೆಯೆ ನಿನ್ನ ಸಾಹಸ ||
ಶರಧಿ ಲಂಘಿಸಿ ದಾನವರನು ತರೆದು
ಸೀತೆಗೆ ಉಂಗುರವಿತ್ತು |
ಪುರವನುರುಹಿ ಹರಿಯಡಿಗೆ ಆ ಕುರುಹ
ತಂದು ಮುಟ್ಟಿಸಿದೆಯೊ 1
ಸಾಸಿರದ ತನ್ನ ಪೆಡೆಯ ನಡುವೆ | ಈಸು
ಸಚರಾಚರವನೆಲ್ಲ |
ಸಾಸಿವೆಯಂದದಲಿ ಇಟ್ಟಾ | ಶೇಷನ-ಮೂಲರೂಪದ ||
ಆ ಶಕುತಿಯನು ತೋರಿಸಲು
ದಶಾಸ್ಯನೆಳೆಯುವ ಸೌಮಿತ್ರಿಯನು
ದಾಶರಥಿಯ ಬಳಿಗೆ ತಂದು | ನೀ ಸಲಹಿದೆ ಜಗವರಿಯಲು2
ತನ್ನ ಜನನಿಯೊಬ್ಬಳಿಗೆ ಸುಪರ್ಣ ಬಳಲಿ ಸುಧೆಯ ತರಲು
ಇನ್ನು ಪೊಗಳುತಿಹುದು ಲೋಕ | ನಿನ್ನಂತೆ ದೂರದಲಿಹ ||
ಉನ್ನತದ ಶತಯೋಜನಗಲದ | ಅನ್ಯರು ತರಲಾರದ ಸಂಜೀ |
ವನ್ನ ಗಿರಿಯ ತಂದು ಕಪಿಗಳನ್ನು ಕಾಯ್ದೆ ತವಕದಿಂದ 3
ಸಕಲ ಪ್ಲವಗನಿಕರ ರಾಮನ | ತ್ರಿಕರಣ
ಸೇವೆಯನು ಮಾಡಿ |
ಮುಕುತಿ ಬೇಡಲಿತ್ತು ನಿನಗೇನು | ಬೇಕೆಂದು
ಕೇಳಲು ನೀನು ನಾ ||
ಲುಕು ಪುರುಷಾರ್ಥಗಳ ಜರಿದು | ಭಕುತಿಯ
ಕೊಡು ಎನಲು ನವಕ
ನಕದ ಮಾಲೆ ಕೊರಳಿಗಿಟ್ಟು ಜಾ | ನಕಿರಮಣನು
ನಿನ್ನ ಪೊಗಳಿದ 4
ಶರಧಿಯ ಮಥನದೊಳುದಿಸಿದ | ಗರಳ ಜಗತ್ತನು ಅಂಜಿಸೆ
ಸಿರಿಯರಸನ ಪೆರ್ಮೆಯಿಂದ | ಸುರಿದು
ಅದನು ಜೀರ್ಣಿಸಿಕೊಂಡ ||
ಮಾರುತನವತಾರ ವೃಕೋ | ದರನೆ ನೀನು ಎಂದರಿಯದೆ
ಮರುಳ ಕೌರವರಿಕ್ಕಿದ ವಿಷವ | ಭರದಿ
ಉಂಡು ತೇಗಿದುದರಿದೆ ? 5
ಅವನಿ ಭಾರಕೆ ಮುಖ್ಯರಾದ | ಕವುರವ ಕೀಚಕಾದಿಗಳನು
ಬವರ ಮುಖದಿ ನಗುತ ಗೆಲಿದು |
ಹವಿಯ ಕೃಷ್ಣಾನಿಗರುಪಿಸಿ
ದಿವಿಜರೆದುರುಗೊಳಲು ಅವರ |
ನವರತಾರತಮ್ಯದಿ ಮನ್ನಿಸಿ |
ಪವನಲೋಕದೊಳು ಮೆರೆದೆ ದ್ರವುಪದಿಯ ಸಹಿತನಾಗಿ6
ಸುರಾಸುರರ ಸಂಗ್ರಾಮದಲಿ | ಅರಿ
ವಿಪ್ರಚಿತ್ತಿಯ ನೀನು ಕೊಲ್ಲಲು |
ವಿರಿಂಚಿ-ಹರರ ವರದಿಂದವನೆ |
ಜರಾಸಂಧನಾಗಿ ಇಳೆಯೊಳು |
ಅರಸುಗಳನು ಕಾಡಲವನ ಸರನೆ ಸೀಳಿ ಪಶುವಿನಂತೆ
ಹರಿಗೆ ಅರ್ಪಿಸಲವನು ಸಕಲಾ | ಧ್ವರಕ್ಕಿಂತಲು ತೃಪ್ತನಾದ 7
ನಡುಮನೆಯೆಂಬ ಸಾಧುದ್ವಿಜನ | ಮಡದಿಯ
ಬಸಿರಿನಲಿ ಉದಿಸಿ
ಕಡು ಕುಮತದ ಮಾಯಿಗಳನು | ಅಡಿಗಡಿಗೇ ಸಚ್ಛಾಸ್ತ್ರದಿ ||
ತಡೆದು ಆನಂದ ಶುಭಗುಣಗಳ | ಕಡಲು
ಹರಿಸರ್ವೋತ್ತಮನೆಂದು
ಒಡಂಬಡಿಸಿ ಸ್ವಮತವನ್ನು | ಪೊಡವಿಯೊಳಗೆ
ಸ್ಥಾಪಿಸಿದೆಯೊ ನೀ 8
ಮರುತ ನಿನ್ನವತಾರ ತ್ರಯವ | ನರಿತು
ಭಜಿಪಗೆ ಶ್ವೇತದ್ವೀಪ |
ದರುಶನವನೆ ಮಾಡಿಸಿ ಶ್ರೀ | ಪುರಂದರ ವಿಠಲೇಶನ |
ಕರುಣಕಟಾಕ್ಷದಿಂದ ವೈಕುಂಠ ಪುರದಿ ಅನಂತಾಸನದಲಿ |
ಪರಮಾನಂದವ ಪಡೆಸಿ ಹೊರೆವೆ |
ಪರಿಪರಿಯ ಭೋಗಗಳನಿತ್ತು 9

No comments:

Post a Comment