ಸಣ್ಣವನ ಮತವಲ್ಲ ಸಾರಿ ಹೇಳಮ್ಮ |
ಕಣ್ಣ ಮುಚ್ಚಿ ಆಡುವಾಗ ಕಾಕು ಮಾಡಲೇತಕಮ್ಮ ಪ
ಮೊಸರ ಕದ್ದರೆ ನಾವು ಮೊರೆಯಿಡ ಬಂದುದಿಲ್ಲ |
ಪೊಸ ಕುಚಗಳ ಮುಟ್ಟಿ ಪೊಗಲೀಸನಮ್ಮ ||
ಹಸು ಮಗನರಿಯದೆ ಆವಾಗಲೂ ಪಿಡಿವ |
ಬಸುರುಹಬಿ ಮೊಗ್ಗೆಯೆಂದು ಪಿಡಿದಡೇನಾಯ್ತಮ್ಮ 1
ನವನೀತ ಬೇಡಿದರೆ ನಾವೇನೆಂಬುದಿಲ್ಲ |
ಯುವತಿಯರಧರವ ಬೇಡಬೇಕೆ? ||
ಅವನಾವಾಗಲೂ ಮೆಲ್ವ ಆಲದ ಪಣ್ಣೆಂದು |
ಸವಿಗಂಡು ಬೇಡಿದರೆ ಸಾಧಿಸಲೇತಕಮ್ಮ 2
ಭೂಮಿಗೆ ಲಂಡನು ನಮ್ಮ ಪುರುಷರಿಲ್ಲದ ವೇಳೆ |
ಕಾಮಿನೆ ಗಂಡನಂದದಿ ಕರೆಯುತೈದಾನೆ ||
ಪ್ರೇಮದಿ ಪುರಂದರವಿಠಲನ ನೆನೆದರೆ |
ಕಾಮಿನಿಯರಿಗೆ ಕಲ್ಪವೃಕ್ಷ ಕೈಸೇರುವಂತೆ 3
No comments:
Post a Comment