Wednesday, 18 December 2019

ಸಜ್ಜನರ ಸಂಗ sajjanara sanga

ಸಜ್ಜನರ ಸಂಗ ನಮಗೆಂದಿಗಾಗುವುದೊ |
ದುರ್ಜನರ ಸಂಗದಿಂದಲಿ ನೊಂದೆ ಹರಿಯೆ ಪ
ವಾಕು-ವಾಕಿಗೆ ಡೊಂಕನೆಣಿಸುವರು-ಮತ್ತೆ |
ಪೋಕರಾಡಿದ ಮಾತು ನಿಜವೆಂಬರು ||
ವಾಕ್‍ಶೂಲಗಳಿಂದ ನೆಡುವರು ಪರರ ನೀ |
ಪೋಕುಮಾನವರಿಂದ ನೊಂದೆ ಹರಿಯೆ 1
ತಾವೆ ತಮ್ಮನ್ನು ಕೊಂಡಾಡಿಕೊಳ್ಳುವರು |
ನ್ಯಾಯವಿಲ್ಲದೆ ನುಡಿವರು ಪರರ ||
ಭಾವಿಸಲರಿಯರು ಗುರುಹಿರಿಯರನಿಂಥ |
ಹೇಯ ಮನುಜರಿಂದ ನೊಂದೆ ಹರಿಯೆ 2
ಒಡಜನರನು ಕೊಂದು ಅಡಗಿಸಿಕೊಂಬರು |
ಬಿಡಲೊಲ್ಲರು ಹಿಡಿದನ್ಯಾಯವ ||
ನುಡಿದು ಕೇಡನು ಒಡನೆ ತಪ್ಪಿಸಿಕೊಂಬಂಥ
ಕಡು ಮೂರ್ಖರಿಂದ ನಾ ನೊಂದೆನು ಹರಿಯೆ 3
ತೊತ್ತಿನೊಡನೆ ತನ್ನ ಸ್ನೇಹ ಸರಸ ಮಾತು |
ತೆತ್ತಿಗರೊಡನೆ ಪಂಥವ ನುಡಿವರು ||
ಸತ್ತಬಳಿಕ ಸೃಷ್ಟಿ ಸಟೆಯೆಂಬರು ಇಂಥ |
ಮತ್ತ ಮನುಜರಿಂದ ನೊಂದೆ ಶ್ರೀಹರಿಯೆ 4
ಇಷ್ಟುದಿನವು ನಿನ್ನ ನೆನೆಯದ ಕಾರಣ |
ಕಷ್ಟಪಡುವ ಕೈಮೇಲಾಗಿ ||
ಸೃಷ್ಟಿಗೊಡೆಯ ಶ್ರೀ ಪುರಂದರವಿಠಲನೆ |
ಮುಟ್ಟಿ ಭಜಿಸಬೇಕು ಧೃಷ್ಟಮನವು ನಿನ್ನ 5

No comments:

Post a Comment