ರಾಘವೇಂದ್ರ ಗುರುರಾಯರ ಸೇವಿಸಿರೊ ಸೌಖ್ಯದಿ ಜೀವಿಸಿರೊ ||pa||
ವಾಸೋತ್ತುಂಗಾ ತೀರದಲ್ಲೆ ನಿಂತು ವಸುಧೆಯೊಳು ಬಂದು ||a.pa||
ಆ ಸುಧೀಂದ್ರ ಕರ ಸರೋಜ ಸಂಜಾತ ವಸುಧೆಯೊಳು ಪುನೀತಾ
ದಾಶರಥಿಯ ದಾಸತ್ವವ ತಾನೂಹಿಸಿ ದುರ್ಮತಿಗಳ ಜಯಿಸಿ ತ್ಯಜಿಸಿ
ಈ ಸಮೀರಮತ ಸಂಸ್ಥಾಪಕರಾಗಿ ನಿಂದಕರನು ನೀಗಿ ಭೂಸುರರಿಗೆ
ಸಂಸೇವಸಹಾಚರಣೀ ಕಂಗೊಳಿಸುವ ಕರುಣಿ ||1||
ಕುಂದದೆ ವರ ಮಂತ್ರಾಲಯದಲ್ಲಿರುವಾ ಕರೆದಲ್ಲಿಗೆ ಬರುವಾ
ಸಂದರುಶನದಿಂದಲಿ ಮಹತ್ಪಾಪ ಪರಿದೋಡಿಸಲಾಪಾ
ವೃಂದಾವನ ಮೃತ್ತಿಕೆ ಜಲಪಾನ ಮುಕ್ತಿಗೆ ಸೋಪಾನ
ಮಂದ ಭಾಗ್ಯರಿಗೆ ದೊರೆಯದಿವರ ಸೇವಾ ಶರಣರ ಸಂಜೀವಾ ||2||
ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸಿದ ಮಾತ್ರಾ
ಮೋದಬಡಿಸುವ ತಾನಿಹಪರದಲ್ಲಿ ಈತಗೆ ಸಮರೆಲ್ಲಿ
ಮೇದಿನಿಯೊಳಗಿನ್ನರಸಲು ಕಾಣೆ ಪುಸಿಯಿಲ್ಲೆನ್ನಾಣೆ
ಪಾದಸ್ಮರಣೆ ಮಾಡದವನೆ ಪಾಪಿ ನಾ ಪೇಳ್ವೆನು||3||

No comments:
Post a Comment